Kannada Translation

Ayah by Ayah

Tags

Download Links

Kannada Translation translation for Surah At-Tahrim — Ayah 4

66:4
إِن تَتُوبَآ إِلَى ٱللَّهِ فَقَدۡ صَغَتۡ قُلُوبُكُمَاۖ وَإِن تَظَٰهَرَا عَلَيۡهِ فَإِنَّ ٱللَّهَ هُوَ مَوۡلَىٰهُ وَجِبۡرِيلُ وَصَٰلِحُ ٱلۡمُؤۡمِنِينَۖ وَٱلۡمَلَٰٓئِكَةُ بَعۡدَ ذَٰلِكَ ظَهِيرٌ ٤
ನೀವಿಬ್ಬರೂ ಅಲ್ಲಾಹನೆಡೆಗೆ ಪಶ್ಚಾತ್ತಾಪಪಟ್ಟು ಮರಳುತ್ತೀರಾದರೆ (ಉತ್ತಮ). ಏಕೆಂದರೆ, ನಿಮ್ಮಿ ಬ್ಬರ ಹೃದಯಗಳು (ಕೆಡುಕಿಗೆ) ವಾಲಿಬಿಟ್ಟಿವೆ. ಇನ್ನು ನೀವಿಬ್ಬರೂ ಪ್ರವಾದಿಯ ವಿರುದ್ಧ ಪರಸ್ಪರ ಸಹಕರಿಸಿದರೆ, (ನೆನಪಿರಲಿ) ಅಲ್ಲಾಹನು ಅವರ ಸಂರಕ್ಷನಾಗಿದ್ದಾನೆ ಮತ್ತು ಜಿಬ್‍ರೀಲರು, ಎಲ್ಲ ಸಜ್ಜನ ಸತ್ಯವಿಶ್ವಾಸಿಗಳು ಮತ್ತು ತದನಂತರ ಎಲ್ಲ ದೇವಚರರೂ (ಪ್ರವಾದಿಯ) ಸಹಾಯಿಗಳಾಗಿರುವರು1.
Footnotes
  • [1] ಈ ಸೂಕ್ತದಲ್ಲಿ ಹೇಳಿದ ಸಜ್ಜನ ವಿಶ್ವಾಸಿಗಳು ಎಂಬುದರ ವಿವಕ್ಷೆ ಮರಣ ಹೊಂದಿದ ಅಂಬಿಯಾಗಳೆಂದು ಖತಾದ . ಸುಫ್‍ಯಾನ್ ಮುಂತಾದ ತಾಬಿಅïಗಳಾದ ಪೂರ್ವಿಕ ವ್ಯಾಖ್ಯಾನಗಾರರು ಹೇಳಿದುದನ್ನು ತಫ್ಸೀರುತ್ತಬ್‍ರೀ (28/105), ತಫ್ಸೀರು ರಾಝೀ (30-44)ಯಲ್ಲಿ ಉದ್ಧರಿಸಲಾಗಿದೆ. ಇಬ್ನು ತೀಮಿಯ್ಯಾರ ಪ್ರಕಾರ ‘ಸತ್ಯವಿಶ್ವಾಸಿಗಳೂ ಭಕ್ತರೂ ಆದ ಅಲ್ಲಾಹನ ಔಲಿಯಾಗಳಾಗಿದ್ದಾರೆ. (ಫತಾವಾ ಇಬ್ನು ತೀಮಿಯಾ 11/94) ತೀರಿಹೋದ ಮಹಾತ್ಮರು ಇಲ್ಲಿರುವವರಿಗೆ ನೆರವಾಗಬಲ್ಲರು ಎಂಬುದಕ್ಕೆ ಇದರಲ್ಲಿ ಆಧಾರವಿದೆ. ನಿಮಗೆ ಸಹಾಯ ಮಾಡುವರು ಎಂಬ ಮಾತಿನ ಅರ್ಥವು ಅವರ ಸಹಾಯವನ್ನು ನೀವು ಪಡಕೊಳ್ಳಬಹುದು ಎಂಬ ಸೂಚನೆಯಾಗಿದೆ. ಆದ್ದರಿಂದ ಸಹಾಯ ಕೇಳುವುದು ಸಮ್ಮತವೆಂದು ಸ್ಪಷ್ಟ. ``ನಿಮಗೆ ಅಲ್ಲಾಹನಲ್ಲದೆ ಬೇರೆ ಸಹಾಯಕನಿಲ್ಲ'' ಎಂಬ ಆಯತ್‍ನಲ್ಲಿ ``ಅಲ್ಲಾಹನಲ್ಲಿ ಸಹಾಯ ಕೇಳಿರಿ'' ಎಂದಿಲ್ಲವಾದರೂ ಅವನಲ್ಲಿ ಸಹಾಯ ಕೇಳಬೇಕು ಎಂಬ ಅರ್ಥ ಸ್ಪಷ್ಟವಾಗುವಂತೆ.