Kannada Translation

Ayah by Ayah

Tags

Download Links

Kannada Translation translation for Surah An-Naba — Ayah 38

78:38
يَوۡمَ يَقُومُ ٱلرُّوحُ وَٱلۡمَلَٰٓئِكَةُ صَفّٗاۖ لَّا يَتَكَلَّمُونَ إِلَّا مَنۡ أَذِنَ لَهُ ٱلرَّحۡمَٰنُ وَقَالَ صَوَابٗا ٣٨
ಆತ್ಮ1 ಮತ್ತು ಮಲಕ್‍ಗಳು ಸಾಲುಸಾಲಾಗಿ ನಿಲ್ಲುವ ಆ ದಿನ! ಕೃಪಾಳುವಾದ ಅಲ್ಲಾಹನು ಸಮ್ಮತಿ ನೀಡಿದ ಹಾಗೂ ಸತ್ಯವನ್ನೇ ನುಡಿದವರಲ್ಲದೆ ಮತ್ತಾರೂ ಅಂದು ಮಾತಾಡಲಾರರು2.
Footnotes
  • [1] ರೂಹ್ (ಆತ್ಮ) ಎಂದರೆ ಜಿಬ್ರೀಲ್ ಅಥವಾ ಅಲ್ಲಾಹನ ಸೇನೆ.
  • [2] ಅರ್ಥಾತ್ ಅಂತ್ಯ ದಿನದ ಭಯಾನಕತೆಯನ್ನು ಕಂಡು ಎಲ್ಲರೂ ಭಯ ವಿಹ್ವಲರಾಗುವರು. ಅಂದು ಯಾರಿಗೂ ಮಾತನಾಡಲು ಧೈರ್ಯವಿರಲಾರದು. ಆದರೆ ಅಲ್ಲಾಹನಿಂದ ಸಮ್ಮತಿ ದೊರೆತ ಸತ್ಯವಂತರಾದ ಸಜ್ಜನರೂ, ಮಲಕ್‍ಗಳೂ ಅಲ್ಲಾಹನೊಂದಿಗೆ ಮಾತನಾಡುವರು. `ಪರಲೋಕದಲ್ಲಿ ಪ್ರವಾದಿ ಮುಹಮ್ಮದ್ ರವರು ಶಿಫಾರಸ್ಸು ಮಾಡುವರೆಂಬುದು ಮುಸ್ಲಿಮ್ ಸಮುದಾಯದ ಒಮ್ಮತಾಭಿಪ್ರಾಯ (ಇಜ್‍ಮಾಅï) ಆಗಿದೆ. ಅಂತೆಯೇ ವಿದ್ವಾಂಸರೂ, ಸಜ್ಜನರೂ, ಅಲ್ಲಾಹನ ಇಷ್ಟದಾಸರೂ ಶಫಾಅತ್ ಮಾಡುವರೆಂದು ಹಲವಾರು ಹದೀಸ್‍ಗಳ ಮೂಲಕ ಸಾಬೀತಾಗಿದೆ. (ರಾಝಿ 3/55 ಖುರ್ಥುಬೀ 154/11)