Kannada Translation

Ayah by Ayah

Tags

Download Links

Kannada Translation translation for Surah An-Nazi'at — Ayah 30

79:30
وَٱلۡأَرۡضَ بَعۡدَ ذَٰلِكَ دَحَىٰهَآ ٣٠
ಅದರ ನಂತರ ಭೂಮಿಯನ್ನು ಹಾಸಿದನು1.
Footnotes
  • [1] `ಅನಂತರ ಭೂಮಿಯನ್ನು ಹಾಸಿದನು' ಎಂಬ ಮಾತಿನ ಬಾಹ್ಯಾರ್ಥವು ಆಕಾಶದ ನಂತರ ಭೂಮಿ ಸೃಷ್ಟಿಯಾಯಿತೆಂದು ವಿಧಿಸುತ್ತದೆ. ಆದರೆ ಸೂರಃ ಅಲ್ ಬಖರಃದ 29ನೇ ಸೂಕ್ತದಲ್ಲಿ ಭೂಮಿಯ ಸೃಷ್ಟಿಯ ನಂತರ ಆಕಾಶದ ಸೃಷ್ಟಿಯನ್ನು ಹೇಳಲಾಗಿದೆ. ಸೂರಃ ಹಾಮೀಮ್ ಅಸ್ಸಜ್ದಃದ 11ನೇ ಸೂಕ್ತದಲ್ಲೂ ಇಂಥದೇ ಪ್ರಸ್ತಾಪವಿದೆ. ಇದರಲ್ಲಿ ವೈರುಧ್ಯವಿಲ್ಲ. ಏಕೆಂದರೆ ಮೊದಲು ಭೂಮಿಯನ್ನು ಒಟ್ಟಾರೆಯಾಗಿ ಒಂದು ಗೋಳದಂತೆ ಸೃಷ್ಟಿಸಲಾಯಿತು. ಆ ಬಳಿಕ ಆಕಾಶವನ್ನು ನಿರ್ಮಿಸಿ ಮತ್ತೆ ಭೂಮಿಯ ಕಡೆ ವಿಶೇಷ ಗಮನಹರಿಸಿ ಅದನ್ನು ವಾಸ್ತವ್ಯಯೋಗ್ಯವಾಗಿಸಲು ಹಾಸಿನಂತೆ ಪರಿವರ್ತಿಸಲಾಯಿತು. (ರಾಝಿ 31/49)