Kannada Translation

Ayah by Ayah

Tags

Download Links

Kannada Translation translation for Surah Al-Inshiqaq — Ayah 8

84:8
فَسَوۡفَ يُحَاسَبُ حِسَابٗا يَسِيرٗا ٨
ಅವನನ್ನು ಲಘುವಾಗಿ ವಿಚಾರಣೆ ಮಾಡಲಾಗುವುದು1.
Footnotes
  • [1] ಲಘುವಾದ ವಿಚಾರಣೆಯೆಂದರೆ ಅವನ ಒಳಿತು ಕೆಡುಕುಗಳನ್ನು ಅವನಿಗೆ ತೋರಿಸಿ ಒಳಿತುಗಳಿಗೆ ಪ್ರತಿಫಲವನ್ನೂ, ಕೆಡುಕುಗಳಿಗೆ ಕ್ಷಮೆಯನ್ನೂ ನೀಡು ವುದಾಗಿದೆ. ಕೆಡುಕುಗಳ ಕುರಿತು ನೀನು ಅದನ್ನು ಏಕೆ ಮಾಡಿದೆ ಎಂದು ಕೇಳಲಾಗÀದು. ಏಕೆಂದರೆ ಹಾಗೆ ವಿಚಾರಿಸಿದರೆ ತÀಕ್ಕುದಾದ ಕಾರಣವನ್ನು ನೀಡಲು ಅವನಿಂದ ಸಾಧ್ಯವಿಲ್ಲ. ಆಗ ಅವನು ಜನರೆಡೆಯಲ್ಲಿ ಅವಮಾನಿತನಾಗುವನು. ವಿಚಾರಣೆ ಲಘುವಾದರೂ ಅಲ್ಲಾಹನ ವಿಚಾರಣೆ ಎಂಬುದನ್ನು ಗಮನಿಸಿ ದರೆ ಭಯಾತಂಕದಿಂದ ಸಂಪೂರ್ಣ ಮುಕ್ತವಲ್ಲವೆಂದು ಹದೀಸ್‍ನಿಂದ ವ್ಯಕ್ತವಾಗಿದೆ. ಅಲ್ಲಾಹನ ಒಂದು ನೋಟ ಮಾತ್ರವಾಗಿರುವುದು ಲಘು ವಿಚಾರಣೆ. ಆದರೆ ಆ ನಿರ್ಣಾಯಕ ಘಟ್ಟದಲ್ಲಿ ಸರ್ವಾಧಿಪತಿಯಾದ ಯಜಮಾನನ ಆ ಒಂದು ನೋಟ ಕೂಡಾ ಭಯಾನಕವಾಗಿರುವುದು. ಲಘುವಾದರೂ ಹಿಸಾಬ್ (ವಿಚಾರಣೆ) ಇದೆ ಎಂಬುದು ಗಮನಾರ್ಹ.