Kannada Translation

Ayah by Ayah

Tags

Download Links

Kannada Translation translation for Surah Al-Buruj — Ayah 3

85:3
وَشَاهِدٖ وَمَشۡهُودٖ ٣
ಸಾಕ್ಷಿಯಾಗುವ ಮತ್ತು ಸಾಕ್ಷಿಗೊಳಗಾಗುವುದರ ಆಣೆ1.
Footnotes
  • [1] ಇಲ್ಲಿ ಹೇಳಲಾದ ಶಾಹಿದ್ (ಸಾಕ್ಷಿ) ಹಾಗೂ ಮಶ್‍ಹೂದ್ (ಸಾಕ್ಷಿಗೊಳಗಾಗುವ ವಸ್ತು) ಏನೆಂಬುದರ ಬಗ್ಗೆ ವಿದ್ವಾಂಸರ ನಡುವೆ ಅನೇಕ ಅಭಿಪ್ರಾಯ ಗಳಿವೆ. ಶಾಹಿದ್ ಎಂದರೆ ಅಂತ್ಯದಿನ ಘಟಿಸುವಾಗ ಅಂದು ಆ ಘಟನೆಗಳಿಗೆ ಪ್ರತ್ಯಕ್ಷದರ್ಶಿಯಾಗುವವನು. ಮಶ್‍ಹೂದ್ ಎಂದರೆ ಅಂದು ಜನರು ಕಣ್ಣಾರೆ ಕಾಣುವ ಅದ್ಭುತ ಘಟನೆ. ಅಥವಾ ಶಾಹಿದ್ ಎಂದರೆ ಪ್ರಪಂಚದ ಸರ್ವ ವಸ್ತುಗಳು. ಮಶ್‍ಹೂದ್ ಎಂದರೆ ಅಲ್ಲಾಹು. ಏಕೆಂದರೆ ಜಗತ್ತಿನಲ್ಲಿರುವ ಸರ್ವ ವಸ್ತುಗಳು ಅಲ್ಲಾಹನ ಇರುವಿಕೆಗೂ, ಸಾಮಥ್ರ್ಯಕ್ಕೂ ಜೀವಂತ ಸಾಕ್ಷಿಗಳಾಗಿವೆ. ಇನ್ನೊಂದು ಅಭಿಪ್ರಾಯ ಪ್ರಕಾರ ಶಾಹಿದ್ ಎಂದರೆ ಶುಕ್ರವಾರ ದಿನ. ಮಶ್‍ಹೂದ್ ಎಂದರೆ ಅರಫಾ ದಿನ. ಅಥವಾ ಸರ್ವ ಪ್ರವಾದಿಗಳು ಮತ್ತು ಅವರ ಸಮುದಾಯಗಳು. ಇಮಾಮ್ ಸಾವಿ ಹೇಳಿದ ಪ್ರಕಾರ ಈ ಎರಡು ಪದಗಳನ್ನು ವ್ಯಾಪಕಾರ್ಥದಲ್ಲಿ ಬಳಸುವುದು ಹೆಚ್ಚು ಉತ್ತಮ.