Kannada Translation

Ayah by Ayah

Tags

Download Links

Kannada Translation translation for Surah Al-Buruj — Ayah 4

85:4
قُتِلَ أَصۡحَٰبُ ٱلۡأُخۡدُودِ ٤
ಅಗ್ನಿ ಗುಂಡಿಗಳ ಜನರು ನಾಶವಾದರು1.
Footnotes
  • [1] ಅರ್ಥಾತ್ ಸತ್ಯವಿಶ್ವಾಸಿಗಳನ್ನು ಅಗ್ನಿಕುಂಡದಲ್ಲಿ ಹಾಕಿ ಸುಟ್ಟು ಹಾಕುವುದನ್ನು ಕಂಡು ಆನಂದ ಪಡುತ್ತಿದ್ದವರು. ಹಿಂದಿನ ಕಾಲದ ಅವಿಶ್ವಾಸಿಯೂ ಅಕ್ರಮಿ ಯೂ ಆಗಿದ್ದ ರಾಜನೊಬ್ಬ ತನ್ನ ಅನುಚರರ ಜತೆ ಸೇರಿ ಸತ್ಯವಿಶ್ವಾಸಿಗಳನ್ನು ಧರ್ಮದಿಂದ ಹಿಂದಿರುಗಿಸಲು ಬಗೆ ಬಗೆಯ ಉಪಾಯಗಳನ್ನು ಹೂಡು ತ್ತಿದ್ದ. ಅದು ಯಾವುದೂ ಫಲಕಾರಿಯಾಗದಿದ್ದಾಗ ಆಳವಾದ ಕಂದಕಗಳÀನ್ನು ತೋಡಿ ಅದರಲ್ಲಿ ಭೀಕರವಾದ ಬೆಂಕಿಯನ್ನು ಉರಿಸಿ ವಿಶ್ವಾಸಿಗಳನ್ನು ಅದಕ್ಕೆಸೆದು ಅಮಾನವೀಯವಾಗಿ ಶಿಕ್ಷಿಸುತ್ತಿದ್ದ. ಅದನ್ನು ಸೂಚಿಸಲು ಖುರ್‍ಆನ್ ಅವರನ್ನು `ಅಸ್‍ಹಾಬುಲ್ ಉಖ್‍ದೂದ್' (ಕಂದಕದ- ಅಗ್ನಿಕುಂಡದ ಜನರು) ಎಂದು ಪ್ರಸ್ತಾಪಿಸಿದೆ. (ಇಬ್ನ್‍ಕಸೀರ್)