Kannada Translation

Ayah by Ayah

Tags

Download Links

Kannada Translation translation for Surah Al-A'la — Ayah 6

87:6
سَنُقۡرِئُكَ فَلَا تَنسَىٰٓ ٦
ತಮಗೆ ನಾವು ಖುರ್‍ಆನನ್ನು ಓದಿ ಕೊಡುತ್ತೇವೆ. ನಂತರ ತಾವು ಅದನ್ನು ಒಮ್ಮೆಯೂ ಮರೆಯಲಾರಿರಿ1.
Footnotes
  • [1] ದಿವ್ಯವಾಣಿ ಅವತೀರ್ಣದ ಪ್ರಾರಂಭ ಹಂತದಲ್ಲಿ ಜಿಬ್‍ರೀಲ್ ರವರು ಖುರ್‍ಆನಿನ ಶ್ಲೋಕಗಳನ್ನು ಓದಿಕೊಡುವಾಗ ಅದು ಪೂರ್ತಿಯಾಗುವುದಕ್ಕಿಂತ ಮುಂಚೆಯೇ ಅದು ಮರೆತು ಹೋಗಬಹುದೋ ಎಂಬ ಅಂಜಿಕೆಯಿಂದ ಪ್ರವಾದಿವರ್ಯ ರು ಅದರ ಮೊದಲ ಭಾಗವನ್ನು ಪುನರಾವರ್ತಿಸುತ್ತಿದ್ದರು. ಆದ್ದರಿಂ ದಲೇ ಅಲ್ಲಾಹನು, ತಾವು ಪೂರ್ತಿಯಾಗಿ ಆಲಿಸುವುದಕ್ಕಿಂತ ಮುಂಚೆ ಪುನರಾವರ್ತಿಸುವುದು ಬೇಡ, ಎಲ್ಲವನ್ನೂ ಪೂರ್ಣವಾಗಿ ಆಲಿಸಿರಿ, ಆಗಲೇ ಅದು ತಮಗೆ ಶಾಶ್ವತವಾಗಿ ಕಂಠಪಾಠವಾಗುವುದು, ನಂತರ ಒಮ್ಮೆಯೂ ಅದನ್ನು ತಾವು ಮರೆಯಲಾರಿರಿ ಎಂದು ಸಾಂತ್ವನಪಡಿಸುತ್ತಾನೆ. ಇದು ಪ್ರವಾದಿವರ್ಯ ರ ಪಾಲಿಗೆ `ಮುಅïಜಿಝತ್' ಆಗಿತ್ತು. (ಖಾಝಿನ್)