Kannada Translation

Ayah by Ayah

Tags

Download Links

Kannada Translation translation for Surah Al-Balad — Ayah 2

90:2
وَأَنتَ حِلُّۢ بِهَٰذَا ٱلۡبَلَدِ ٢
ತಾವು ಈ ಊರಲ್ಲಿ ಮುಕ್ತರಾಗಿದ್ದೀರಿ1.
Footnotes
  • [1] ಎರಡು ಆಣೆಗಳ ಮಧ್ಯೆ ಇದೊಂದು ಸ್ವತಂತ್ರ ವಾಕ್ಯ. ಇದರ ಉದ್ದೇಶಾರ್ಥವೇನೆಂದರೆ ಈ ನಾಡಿನಲ್ಲಿ ಈಗ ನೀವು ಶತ್ರುಗಳ ನಿರ್ಭಂಧ, ಬಹಿಷ್ಕಾರಗಳಿಗೆ ಒಳಗಾಗಿ ಕಷ್ಟದಲ್ಲಿದ್ದರೂ ಮುಂದೊಂದು ದಿನ ನೀವು ಈ ನಾಡಿನ ಅಧಿಪತಿಯಾಗಿ ಸ್ವತಂತ್ರರಾಗಲಿದ್ದೀರಿ. ಶತ್ರುಗಳ ಎಲ್ಲ ನಿಷೇಧಗಳಿಂದಲೂ ಮುಕ್ತರಾಗಲಿದ್ದೀರಿ ಎಂದಾಗಿದೆ. ಇದು ನಬಿ ಯವರಿಗೆ ಅಲ್ಲಾಹು ನೀಡುತ್ತಿರುವ ಸಾಂತ್ವನ. ಮುಂದೆ ಬರಲಿರುವ ಕಾರ್ಯವಾದುದರಿಂದ ಮುಕ್ತರಾಗಲಿದ್ದೀರಿ ಎಂದು ಹೇಳಬೇಕಾದಲ್ಲಿ ಮುಕ್ತರಾಗಿದ್ದೀರಿ ಎಂದು ಭೂತಕಾಲ ಪದದಲ್ಲಿ ಹೇಳಿರುವುದು ಆ ಕಾರ್ಯ ಅಷ್ಟೊಂದು ಖಚಿತ ಎಂದು ಸೂಚಿಸಲಿಕ್ಕಾಗಿದೆ. ಮಕ್ಕಾ ಫತ್‍ಹ್‍ನೊಂದಿಗೆ ಅಲ್ಲಾಹನ ಈ ವಾಗ್ದಾನ ನೆರವೇರಿಸಲ್ಪಟ್ಟಿದೆ. ಮಕ್ಕಾವು ಹರಮ್ ಶರೀಫ್ ಆಗಿರುವುದರಿಂದ ಅಲ್ಲಿ ಕೊಲ್ಲುವುದು, ಯುದ್ಧ ಮಾಡುವುದು ನಿಷಿದ್ಧವಾಗಿದ್ದರೂ ಪ್ರವಾದಿವರ್ಯ ರ ಪಾಲಿಗೆ ಅದು ಸಮ್ಮತವಾಗಿರುವುದು ಎಂಬ ವ್ಯಾಖ್ಯಾನವೂ ಈ ಸೂಕ್ತಕ್ಕಿದೆ.