Kannada Translation

Ayah by Ayah

Tags

Download Links

Kannada Translation translation for Surah Ash-Sharh — Ayah 2

94:2
وَوَضَعۡنَا عَنكَ وِزۡرَكَ ٢
ತಮ್ಮ ಕರ್ತವ್ಯ ಭಾರವನ್ನು ನಾವು ಇಳಿಸಲಿಲ್ಲವೇ?1
Footnotes
  • [1] ವಿಝ್ರ್ ಎಂಬುದಕ್ಕೆ ಘನವಾದ ಹೊರೆ, ಪಾಪ ಎಂಬಿತ್ಯಾದಿ ಅರ್ಥಗಳಿವೆ. ಮೊದಲನೆಯ ಅರ್ಥ ಪ್ರಕಾರ ಇಲ್ಲಿಯ ಸಾರಾಂಶವೇನೆಂದರೆ, ಪ್ರವಾದಿವರ್ಯ ರಿಗೆ ಪ್ರವಾದಿತ್ವ ಲಭಿಸಿದ ಸಂದರ್ಭದಲ್ಲಿ ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ತನ್ನಿಂದ ಸಾಧ್ಯವೇ ಎಂಬ ಭಯ ಅವರನ್ನು ಸದಾ ಕಾಡುತ್ತಿತ್ತು. ಎಲ್ಲಿಯವರೆಗೆಂದರೆ ನುಬುವ್ವತ್ ಲಭಿಸಿದ ದಿವಸದಂದು ಅವರಿಗೆ ಜ್ವರವೂ ಭಾದಿಸಿತ್ತು. ಆದರೆ ಕ್ರಮೇಣ ಅಲ್ಲಾಹು ಅವರ ಈ ಕರ್ತವ್ಯ ಭಾರವನ್ನು ಸರಳಗೊಳಿಸಿದನು. ಆದ್ದರಿಂದ ‘ಪ್ರವಾದಿತ್ವದ ಗಂಭೀರವಾದ ಹೊಣೆಗಾರಿಕೆಯ ಭಾರವನ್ನು ಸರಳಗೊಳಿಸಿ, ಸುಲಭವಾಗುವಂತೆ ಮಾಡಿದೆ ಎನ್ನುವುದು ಇಲ್ಲಿಯ ತಾತ್ಪರ್ಯ. ಎರಡನೆಯ ಅರ್ಥ ಪ್ರಕಾರ ಸೂಕ್ತದ ಸಾರಾಂಶವೇನೆಂದರೆ ತಪ್ಪುಗಳಿಂದ ತಮ್ಮನ್ನು ಸಂರಕ್ಷಿಸಲಿಲ್ಲವೇ ಎಂದಾಗಿದೆ. ಅಂದರೆ ಪ್ರವಾದಿವರ್ಯ ರಿಂದ ಯಾವುದೇ ತಪ್ಪುಗಳು ಉಂಟಾಗದ ರೀತಿಯಲ್ಲಿ ಅಲ್ಲಾಹು ಅವರನ್ನು ಸೃಷ್ಟಿಸಿದ್ದಾನೆ. ನುಬುವ್ವತ್‍ಗಿಂತ ಮುಂಚೆಯೂ ನಂತರವೂ ಅವರಿಂದ ಯಾವುದೇ ಪಾಪ ಕೃತ್ಯಗಳು ಸಂಭವಿಸಿಲ್ಲ.