Kannada Translation

Ayah by Ayah

Tags

Download Links

Kannada Translation translation for Surah Ash-Sharh — Ayah 1

94:1
أَلَمۡ نَشۡرَحۡ لَكَ صَدۡرَكَ ١
ನಾವು ತಮಗಾಗಿ ತಮ್ಮ ಹೃದಯವನ್ನು ವಿಸ್ತಾರ ಗೊಳಿಸಲಿಲ್ಲವೇ?1
Footnotes
  • [1] *`ಶರಹ್' ಎಂದರೆ ವಿಶಾಲಗೊಳಿಸುವುದು ಎಂದರ್ಥ. ಈ ಅಧ್ಯಾಯದಲ್ಲಿ ಬಳಸಲಾದ `ನಶ್‍ರಹ್' ಎಂಬುದರ ಕ್ರಿಯಾಧಾತುವಿದು. `ಇನ್ಶಿರಾಹ್' ಎಂದೂ ಇದಕ್ಕೆ ಹೆಸರಿದೆ. ಅರ್ಥಾತ್ ಯಾವುದೇ ಕೆಟ್ಟ ಸ್ವಭಾವಗಳು ಸ್ಪರ್ಶಿಸದ, ಸರ್ವ ಸತ್ ಸ್ವಭಾವಗಳೂ ಮೇಳೈಸಿದ, ಎಂತಹ ಸಂಕಷ್ಟಗಳನ್ನೂ ಎದುರಿಸುವ, ಎಲ್ಲಾ ಜ್ಞಾನವನ್ನೂ ಕರಗತ ಮಾಡಿದ ಮತ್ತು ಎಂತಹ ಸೂಕ್ಷ್ಮ ವಿಷಯಗಳನ್ನೂ ಮನನ ಮಾಡುವ ಅತೀ ವಿಶಾಲವಾದ ಹೃದಯವನ್ನಾಗಿ ಮಾಡಿಲ್ಲವೇ? ಅಭೌತಿಕವಾದ ರೀತಿಯಲ್ಲಿ ಅಲ್ಲಾಹನ ಮಲಕ್‍ಗಳು ಪ್ರವಾದಿವರ್ಯ ರವರ ಹೃದಯವನ್ನು ಝಂ ಝಂ ನೀರಿನಿಂದ ತೊಳೆದು ಪವಿತ್ರಗೊಳಿಸಿದ ಬಗ್ಗೆ ಸ್ವಹೀಹ್ ಬುಖಾರಿಯಲ್ಲಿ ವರದಿಯಾಗಿದೆ. ಪ್ರವಾದಿವರ್ಯ ರು ಪಾಪ ಸುರಕ್ಷಿತರಾಗಿದ್ದರೆಂಬುದಕ್ಕೆ ಈ ಸೂಕ್ತದಲ್ಲಿ ಪುರಾವೆಯಿದೆ.