Muhammad Hamza Battur

Ayah by Ayah

Tags

Download Links

Muhammad Hamza Battur translation for Surah Al-Ahzab — Ayah 40

33:40
مَّا كَانَ مُحَمَّدٌ أَبَآ أَحَدٖ مِّن رِّجَالِكُمۡ وَلَٰكِن رَّسُولَ ٱللَّهِ وَخَاتَمَ ٱلنَّبِيِّـۧنَۗ وَكَانَ ٱللَّهُ بِكُلِّ شَيۡءٍ عَلِيمٗا ٤٠
ಮುಹಮ್ಮದ್ ನಿಮ್ಮ ಪುರುಷರಲ್ಲಿ ಯಾರಿಗೂ ತಂದೆಯಲ್ಲ.1 ಆದರೆ ಅವರು ಅಲ್ಲಾಹನ ಸಂದೇಶವಾಹಕರು ಮತ್ತು ಎಲ್ಲಾ ಪ್ರವಾದಿಗಳ ಮೊಹರಾಗಿದ್ದಾರೆ.2 ಅಲ್ಲಾಹು ಎಲ್ಲಾ ವಿಷಯಗಳ ಬಗ್ಗೆ ತಿಳಿದವನಾಗಿದ್ದಾನೆ.
Footnotes
  • [1] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝೈನಬರನ್ನು ವಿವಾಹವಾದಾಗ, ಮುಹಮ್ಮದ್ ತನ್ನ ಸೊಸೆಯನ್ನೇ ವಿವಾಹವಾಗಿದ್ದಾರೆ ಎಂದು ಸತ್ಯನಿಷೇಧಿಗಳು ಮತ್ತು ಕಪಟವಿಶ್ವಾಸಿಗಳು ಗುಲ್ಲೆಬ್ಬಿಸಿದರು. ಇದಕ್ಕೆ ಉತ್ತರವಾಗಿ ಈ ವಚನವು ಅವತೀರ್ಣವಾಯಿತು. ಅಂದರೆ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಂಡು ಮಕ್ಕಳಿಲ್ಲ. ನಿಮ್ಮಲ್ಲಿ ಯಾರೂ ಅವರ ಗಂಡು ಮಕ್ಕಳಲ್ಲ. ಅವರ ದತ್ತುಪುತ್ರ ಝೈದ್ ಅವರ ಸ್ವಂತ ಮಗನಲ್ಲದ್ದರಿಂದ ಝೈನಬ ಅವರ ಸೊಸೆಯಲ್ಲ.
  • [2] ಅಂದರೆ ಅವರು ಅಂತಿಮ ಪ್ರವಾದಿ. ಅವರ ನಂತರ ಬೇರೆ ಪ್ರವಾದಿ ಬರುವುದಿಲ್ಲ.