Muhammad Hamza Battur

Ayah by Ayah

Tags

Download Links

Muhammad Hamza Battur translation for Surah Al-Ahzab — Ayah 9

33:9
يَٰٓأَيُّهَا ٱلَّذِينَ ءَامَنُواْ ٱذۡكُرُواْ نِعۡمَةَ ٱللَّهِ عَلَيۡكُمۡ إِذۡ جَآءَتۡكُمۡ جُنُودٞ فَأَرۡسَلۡنَا عَلَيۡهِمۡ رِيحٗا وَجُنُودٗا لَّمۡ تَرَوۡهَاۚ وَكَانَ ٱللَّهُ بِمَا تَعۡمَلُونَ بَصِيرًا ٩
ಓ ಸತ್ಯವಿಶ್ವಾಸಿಗಳೇ! ಅಲ್ಲಾಹು ನಿಮಗೆ ತೋರಿದ ಅನುಗ್ರಹವನ್ನು ಸ್ಮರಿಸಿರಿ. ಆ ಸೈನ್ಯಗಳು ನಿಮ್ಮ ಬಳಿಗೆ ಬಂದಾಗ, ನಾವು ಅವರ ವಿರುದ್ಧ ಬಿರುಗಾಳಿಯನ್ನು ಮತ್ತು ನಿಮಗೆ ಕಾಣದಂತಹ ಸೈನ್ಯಗಳನ್ನು ಕಳುಹಿಸಿದ ಸಂದರ್ಭ.1 ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ನೋಡುತ್ತಿದ್ದಾನೆ.
Footnotes
  • [1] ಹಿಜ್ರ 5ನೇ ವರ್ಷದಲ್ಲಿ ಮಕ್ಕಾದ ಕುರೈಶರು ಮತ್ತು ಅವರ ಮೈತ್ರಿ ಮಾಡಿಕೊಂಡ ಗೋತ್ರಗಳು ಸೇರಿ ಸುಮಾರು 10,000 ಸಂಖ್ಯೆಯ ಬೃಹತ್ ಸೈನ್ಯದೊಂದಿಗೆ ಅವರು ಮದೀನದ ಮೇಲೆ ದಂಡೆತ್ತಿ ಬಂದರು. ಈ ಯುದ್ಧವನ್ನು ಅಹ್ಝಾಬ್ ಯುದ್ಧ ಅಥವಾ ಖಂದಕ್ ಯುದ್ಧ ಎಂದು ಕರೆಯಲಾಗುತ್ತದೆ. ವೈರಿಗಳು ಮದೀನ ಪ್ರವೇಶಿಸದಂತೆ ಮುಸಲ್ಮಾನರು ಮದೀನದ ಸುತ್ತಲು ಹೊಂಡ ತೋಡಿದರು. ವೈರಿಗಳು ಮದೀನ ಪ್ರವೇಶಿಸಲಾಗದೆ ಅದರ ಹೊರವಲಯದಲ್ಲಿ ಬೀಡು ಬಿಟ್ಟು ಸುಮಾರು ಒಂದು ತಿಂಗಳ ಕಾಲ ಮದೀನಕ್ಕೆ ದಿಗ್ಬಂಧನ ಹಾಕಿದರು. ಕೊನೆಗೆ ಒಂದು ರಾತ್ರಿ ತೀವ್ರ ಸ್ವರೂಪದ ಬಿರುಗಾಳಿ ಬೀಸಿ ಅವರ ಡೇರೆಗಳೆಲ್ಲವೂ ಹಾರಿಹೋದವು. ಗಾಳಿಮಳೆಯಿಂದ ಅವರು ಅಲ್ಲಿ ಉಳಿಯಲು ಸಾಧ್ಯವಾಗದೆ ಎಲ್ಲರೂ ಅಲ್ಲಿಂದ ಪಲಾಯನ ಮಾಡಿದರು.