Muhammad Hamza Battur

Ayah by Ayah

Tags

Download Links

Muhammad Hamza Battur translation for Surah Saba — Ayah 18

34:18
وَجَعَلۡنَا بَيۡنَهُمۡ وَبَيۡنَ ٱلۡقُرَى ٱلَّتِي بَٰرَكۡنَا فِيهَا قُرٗى ظَٰهِرَةٗ وَقَدَّرۡنَا فِيهَا ٱلسَّيۡرَۖ سِيرُواْ فِيهَا لَيَالِيَ وَأَيَّامًا ءَامِنِينَ ١٨
ನಾವು ಅವರ ಮತ್ತು ನಾವು ಸಮೃದ್ದಿ ನೀಡಿದ ಊರುಗಳ (ಪ್ಯಾಲಸ್ತೀನ್-ಸಿರಿಯಾ) ನಡುವೆ ಅನೇಕ ಊರುಗಳನ್ನು ಸ್ಥಾಪಿಸಿದೆವು.1 ಅಲ್ಲಿ ನಾವು (ನಿಶ್ಚಿತ ಅಂತರದಲ್ಲಿ) ಕೆಲವು ತಂಗುದಾಣಗಳನ್ನು ನಿರ್ಣಯಿಸಿದೆವು. (ನಾವು ಹೇಳಿದೆವು): “ಹಗಲು-ರಾತ್ರಿ ಅವುಗಳ ಮೂಲಕ ನಿರ್ಭಯವಾಗಿ ಪ್ರಯಾಣ ಮಾಡಿರಿ.”
Footnotes
  • [1] ಇದು ಸಿರಿಯಾ ಮತ್ತು ಯಮನ್‌ನ ನಡುವಿನಲ್ಲಿದ್ದ ಹೆದ್ದಾರಿಯ ಬಗ್ಗೆಯಾಗಿದೆ. ಈ ಹೆದ್ದಾರಿಯಲ್ಲಿ 4,700 ಊರುಗಳಿದ್ದವು ಎಂದು ಹೇಳಲಾಗುತ್ತದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಊರುಗಳಿದ್ದುದರಿಂದ ಈ ದಾರಿಯಲ್ಲಿ ಪ್ರಯಾಣ ಮಾಡುವವರಿಗೆ ಆಹಾರ-ಪಾನೀಯ ಮತ್ತು ವಸತಿಗಾಗಿ ಪರದಾಡಬೇಕಾಗಿ ಬರುತ್ತಿರಲಿಲ್ಲ. ಹಾಗೆಯೇ ಕಳ್ಳರು ದರೋಡೆಕೋರರ ಭಯವೂ ಇರಲಿಲ್ಲ.