Muhammad Hamza Battur

Ayah by Ayah

Tags

Download Links

Muhammad Hamza Battur translation for Surah Al-Hadid — Ayah 10

57:10
وَمَا لَكُمۡ أَلَّا تُنفِقُواْ فِي سَبِيلِ ٱللَّهِ وَلِلَّهِ مِيرَٰثُ ٱلسَّمَٰوَٰتِ وَٱلۡأَرۡضِۚ لَا يَسۡتَوِي مِنكُم مَّنۡ أَنفَقَ مِن قَبۡلِ ٱلۡفَتۡحِ وَقَٰتَلَۚ أُوْلَٰٓئِكَ أَعۡظَمُ دَرَجَةٗ مِّنَ ٱلَّذِينَ أَنفَقُواْ مِنۢ بَعۡدُ وَقَٰتَلُواْۚ وَكُلّٗا وَعَدَ ٱللَّهُ ٱلۡحُسۡنَىٰۚ وَٱللَّهُ بِمَا تَعۡمَلُونَ خَبِيرٞ ١٠
ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡದಿರಲು ನಿಮಗೇನಾಗಿದೆ? ವಾಸ್ತವವಾಗಿ ಭೂಮ್ಯಾಕಾಶಗಳ ಉತ್ತರಾಧಿಕಾರದ ಹಕ್ಕು ಅಲ್ಲಾಹನಿಗೆ ಸೇರಿದ್ದು. ನಿಮ್ಮಲ್ಲಿ ಮಕ್ಕಾ ವಿಜಯಕ್ಕೆ ಮೊದಲು (ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡಿದವರು ಮತ್ತು ಯುದ್ಧ ಮಾಡಿದವರು ಇತರರಿಗೆ ಸಮಾನರಾಗುವುದಿಲ್ಲ. ಇವರಿಗೆ ಮಕ್ಕಾ ವಿಜಯದ ನಂತರ ಖರ್ಚು ಮಾಡಿದವರು ಮತ್ತು ಯುದ್ಧ ಮಾಡಿದವರಿಗಿಂತಲೂ ಶ್ರೇಷ್ಠ ಸ್ಥಾನಮಾನಗಳಿವೆ. ಅಲ್ಲಾಹು ಎಲ್ಲರಿಗೂ ಒಳಿತನ್ನು ವಾಗ್ದಾನ ಮಾಡಿದ್ದಾನೆ. ಅಲ್ಲಾಹು ನೀವು ಮಾಡುವ ಕರ್ಮಗಳ ಬಗ್ಗೆ ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ.