Muhammad Hamza Battur

Ayah by Ayah

Tags

Download Links

A translation of every ayah of the Quran in Kannada.

Muhammad Hamza Battur translation for Surah Al-Mujadila — Ayah 1

58:1
قَدۡ سَمِعَ ٱللَّهُ قَوۡلَ ٱلَّتِي تُجَٰدِلُكَ فِي زَوۡجِهَا وَتَشۡتَكِيٓ إِلَى ٱللَّهِ وَٱللَّهُ يَسۡمَعُ تَحَاوُرَكُمَآۚ إِنَّ ٱللَّهَ سَمِيعُۢ بَصِيرٌ ١
(ಓ ಪ್ರವಾದಿಯವರೇ!) ನಿಮ್ಮೊಡನೆ ತನ್ನ ಗಂಡನ ವಿಷಯದಲ್ಲಿ ತರ್ಕಿಸುವ ಮತ್ತು ತನ್ನ ಅಳಲನ್ನು ಅಲ್ಲಾಹನಲ್ಲಿ ತೋಡಿಕೊಳ್ಳುವ ಒಬ್ಬ ಮಹಿಳೆಯ ಮಾತನ್ನು ಖಂಡಿತವಾಗಿಯೂ ಅಲ್ಲಾಹು ಕೇಳಿದನು.1 ಅಲ್ಲಾಹು ನಿಮ್ಮಿಬ್ಬರ ಸಂಭಾಷಣೆಯನ್ನು ಕೇಳುತ್ತಿದ್ದನು. ಖಂಡಿತವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ.
Footnotes
  • [1] ಖೌಲ ಬಿನ್ತ್ ಮಾಲಿಕ್ ಬಿನ್ ಸಅಲಬ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ರನ್ನು ಅವರ ಗಂಡ ಔಸ್ ಬಿನ್ ಸಾಮಿತ್ ಝಿಹಾರ್ ಮಾಡಿದ್ದರು. ಝಿಹಾರ್ ಎಂದರೆ ಪತ್ನಿಯೊಡನೆ, “ನೀನು ನನಗೆ ನನ್ನ ತಾಯಿಯ ಬೆನ್ನಿನಂತೆ” ಎಂದು ಹೇಳಿ ಅವಳೊಡನೆ ಲೈಂಗಿಕ ಸಂಪರ್ಕವನ್ನು ತೊರೆಯುವುದು. ಖೌಲ ಈ ವಿಷಯವನ್ನು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿ ಅವರೊಡನೆ ವಿಧಿ ಕೇಳಿದರು. ಆದರೆ ಈ ವಿಷಯದಲ್ಲಿ ಈ ತನಕ ಯಾವುದೇ ವಿಧಿ ಅವತೀರ್ಣವಾಗಿರಲಿಲ್ಲ.