Muhammad Hamza Battur

Ayah by Ayah

Tags

Download Links

Muhammad Hamza Battur translation for Surah Al-Hashr — Ayah 9

59:9
وَٱلَّذِينَ تَبَوَّءُو ٱلدَّارَ وَٱلۡإِيمَٰنَ مِن قَبۡلِهِمۡ يُحِبُّونَ مَنۡ هَاجَرَ إِلَيۡهِمۡ وَلَا يَجِدُونَ فِي صُدُورِهِمۡ حَاجَةٗ مِّمَّآ أُوتُواْ وَيُؤۡثِرُونَ عَلَىٰٓ أَنفُسِهِمۡ وَلَوۡ كَانَ بِهِمۡ خَصَاصَةٞۚ وَمَن يُوقَ شُحَّ نَفۡسِهِۦ فَأُوْلَٰٓئِكَ هُمُ ٱلۡمُفۡلِحُونَ ٩
ಅವರಿಗಿಂತ ಮೊದಲೇ ಆ ಮನೆಯಲ್ಲಿ (ಮದೀನದಲ್ಲಿ) ಮತ್ತು ಸತ್ಯವಿಶ್ವಾಸದಲ್ಲಿ ವಾಸ್ತವ್ಯವನ್ನು ಸಿದ್ಧಗೊಳಿಸಿದವರಿಗೂ (ಇರುವುದಾಗಿದೆ). ಅವರು ತಮ್ಮ ಬಳಿಗೆ ವಲಸೆ (ಹಿಜ್ರ) ಮಾಡಿದವರನ್ನು ಪ್ರೀತಿಸುತ್ತಾರೆ.1 ಮುಹಾಜಿರರಿಗೆ ಏನು ಕೊಡಲಾಗುತ್ತದೋ ಅದರ ಬಗ್ಗೆ ಇವರಿಗೆ ಇವರ ಹೃದಯದಲ್ಲಿ ಯಾವುದೇ ಅಸಮಾಧಾನವು ಉಂಟಾಗುವುದಿಲ್ಲ. ತಮಗೆ ಎಷ್ಟೇ ಅಗತ್ಯವಿದ್ದರೂ ಸಹ ಇವರು ಅವರಿಗೆ ಆದ್ಯತೆಯನ್ನು ನೀಡುತ್ತಾರೆ. ಯಾರನ್ನು ಅವರ ಮನಸ್ಸಿನ ಜಿಪುಣತನದಿಂದ ರಕ್ಷಿಸಲಾಗಿದೆಯೋ ಅವರೇ ಯಶಸ್ವಿಯಾದವರು.
Footnotes
  • [1] ಮುಹಾಜಿರ್‌ಗಳೆಂದರೆ ಮಕ್ಕಾದಿಂದ ಮದೀನಕ್ಕೆ ವಲಸೆ ಬಂದವರು. ಅವರಿಗೆ ಸಂರಕ್ಷಣೆ ನೀಡಿ ಸಹಾಯ ಮಾಡಿದ ಮದೀನ ನಿವಾಸಿಗಳಾದ ಮುಸ್ಲಿಮರನ್ನು ಅನ್ಸಾರ್ ಎಂದು ಕರೆಯಲಾಗುತ್ತದೆ.