Muhammad Hamza Battur

Ayah by Ayah

Tags

Download Links

A translation of every ayah of the Quran in Kannada.

Muhammad Hamza Battur translation for Surah Al-Mumtahanah — Ayah 4

60:4
قَدۡ كَانَتۡ لَكُمۡ أُسۡوَةٌ حَسَنَةٞ فِيٓ إِبۡرَٰهِيمَ وَٱلَّذِينَ مَعَهُۥٓ إِذۡ قَالُواْ لِقَوۡمِهِمۡ إِنَّا بُرَءَٰٓؤُاْ مِنكُمۡ وَمِمَّا تَعۡبُدُونَ مِن دُونِ ٱللَّهِ كَفَرۡنَا بِكُمۡ وَبَدَا بَيۡنَنَا وَبَيۡنَكُمُ ٱلۡعَدَٰوَةُ وَٱلۡبَغۡضَآءُ أَبَدًا حَتَّىٰ تُؤۡمِنُواْ بِٱللَّهِ وَحۡدَهُۥٓ إِلَّا قَوۡلَ إِبۡرَٰهِيمَ لِأَبِيهِ لَأَسۡتَغۡفِرَنَّ لَكَ وَمَآ أَمۡلِكُ لَكَ مِنَ ٱللَّهِ مِن شَيۡءٖۖ رَّبَّنَا عَلَيۡكَ تَوَكَّلۡنَا وَإِلَيۡكَ أَنَبۡنَا وَإِلَيۡكَ ٱلۡمَصِيرُ ٤
ನಿಮಗೆ ಇಬ್ರಾಹೀಮ‌ರಲ್ಲಿ ಮತ್ತು ಅವರ ಸಂಗಡಿಗರಲ್ಲಿ ಅತ್ಯುತ್ತಮ ಮಾದರಿಯಿದೆ. ಅವರು ತಮ್ಮ ಜನರೊಂದಿಗೆ ಹೇಳಿದ ಸಂದರ್ಭ: “ನಿಶ್ಚಯವಾಗಿಯೂ ನಾವು ನಿಮ್ಮಿಂದ ಮತ್ತು ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿರುವ ದೇವರುಗಳಿಂದ ಸಂಪೂರ್ಣ ದೂರವಾಗಿದ್ದೇವೆ. ನಾವು ನಿಮ್ಮ (ವಿಶ್ವಾಸ ನಂಬಿಕೆಗಳನ್ನು) ನಿಷೇಧಿಸಿದ್ದೇವೆ. ನೀವು ಅಲ್ಲಾಹನಲ್ಲಿ ಮಾತ್ರ ವಿಶ್ವಾಸವಿಡುವ ತನಕ ನಮ್ಮ ಮತ್ತು ನಿಮ್ಮ ನಡುವೆ ಶಾಶ್ವತ ವೈರ ಹಾಗೂ ವಿದ್ವೇಷವು ಬಹಿರಂಗವಾಗಿಬಿಟ್ಟಿದೆ.” ಆದರೆ ಇಬ್ರಾಹೀಮರು ತಮ್ಮ ತಂದೆಯೊಡನೆ ಹೇಳಿದ ಈ ಮಾತುಗಳು ಇದಕ್ಕೆ ಹೊರತಾಗಿವೆ:1 “ನಾನು ನಿಮಗೋಸ್ಕರ ಅಲ್ಲಾಹನಲ್ಲಿ ಖಂಡಿತ ಕ್ಷಮೆಯಾಚಿಸುತ್ತೇನೆ. ಅಲ್ಲಾಹನ ಮುಂದೆ ನಿಮಗೋಸ್ಕರ ಏನೂ ಮಾಡಲು ನನಗೆ ಸಾಧ್ಯವಿಲ್ಲ.” ಓ ನಮ್ಮ ಪರಿಪಾಲಕನೇ! ನಾವು ನಿನ್ನಲ್ಲಿ ಭರವಸೆಯಿಟ್ಟಿದ್ದೇವೆ ಮತ್ತು ನಿನ್ನ ಕಡೆಗೆ ಮರಳಿದ್ದೇವೆ. ಮರಳಬೇಕಾದುದು ನಿನ್ನ ಕಡೆಗೇ ಆಗಿದೆ.
Footnotes
  • [1] ಅಂದರೆ “ನಾನು ನಿಮಗೋಸ್ಕರ ಅಲ್ಲಾಹನಲ್ಲಿ ಖಂಡಿತ ಕ್ಷಮೆಯಾಚಿಸುತ್ತೇನೆ” ಎಂದು ಇಬ್ರಾಹೀಮರು (ಅವರ ಮೇಲೆ ಶಾಂತಿಯಿರಲಿ) ಹೇಳಿದ ಮಾತಿನಲ್ಲಿ ಸತ್ಯವಿಶ್ವಾಸಿಗಳಿಗೆ ಮಾದರಿಯಿಲ್ಲ.