Muhammad Hamza Battur

Ayah by Ayah

Tags

Download Links

A translation of every ayah of the Quran in Kannada.

Muhammad Hamza Battur translation for Surah At-Tahrim — Ayah 3

66:3
وَإِذۡ أَسَرَّ ٱلنَّبِيُّ إِلَىٰ بَعۡضِ أَزۡوَٰجِهِۦ حَدِيثٗا فَلَمَّا نَبَّأَتۡ بِهِۦ وَأَظۡهَرَهُ ٱللَّهُ عَلَيۡهِ عَرَّفَ بَعۡضَهُۥ وَأَعۡرَضَ عَنۢ بَعۡضٖۖ فَلَمَّا نَبَّأَهَا بِهِۦ قَالَتۡ مَنۡ أَنۢبَأَكَ هَٰذَاۖ قَالَ نَبَّأَنِيَ ٱلۡعَلِيمُ ٱلۡخَبِيرُ ٣
ಪ್ರವಾದಿಯವರು ತಮ್ಮ ಪತ್ನಿಯರಲ್ಲಿ ಒಬ್ಬಳಿಗೆ ಗುಟ್ಟಾಗಿ ಒಂದು ಮಾತನ್ನು ಹೇಳಿದ ಸಂದರ್ಭ(ವನ್ನು ಸ್ಮರಿಸಿ).1 ಅವಳು ಅದನ್ನು (ಇನ್ನೊಬ್ಬ ಪತ್ನಿಗೆ) ತಿಳಿಸಿದಾಗ ಮತ್ತು ಅಲ್ಲಾಹು ತನ್ನ ಪ್ರವಾದಿಗೆ ಅದನ್ನು ಬಹಿರಂಗಪಡಿಸಿದಾಗ, ಅವರು ಅದರ ಕೆಲವು ಭಾಗಗಳನ್ನು (ಪತ್ನಿಗೆ) ತಿಳಿಸಿ ಕೆಲವು ಭಾಗಗಳನ್ನು ನಿರ್ಲಕ್ಷಿಸಿದರು. ನಂತರ ಅವರು ಅದನ್ನು ಪತ್ನಿಗೆ ತಿಳಿಸಿದಾಗ ಅವಳು ಕೇಳಿದಳು: “ನಿಮಗೆ ಇದನ್ನು ತಿಳಿಸಿದ್ದು ಯಾರು?” ಅವರು ಉತ್ತರಿಸಿದರು: “ಸರ್ವಜ್ಞನು ಮತ್ತು ಸೂಕ್ಷ್ಮಜ್ಞಾನಿಯಾದ ಅಲ್ಲಾಹು ನನಗೆ ತಿಳಿಸಿದನು.”
Footnotes
  • [1] ನಾನು ಇನ್ನು ಮುಂದೆ ಜೇನು ಸೇವಿಸುವುದಿಲ್ಲವೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪತ್ನಿ ಹಫ್ಸರಿಗೆ ತಿಳಿಸಿದ್ದರು. ಅವರು ಅದನ್ನು ಆಯಿಶರಿಗೆ ತಿಳಿಸಿದರು.