Kannada translation - Bashir Missouri

Ayah by Ayah

Tags

Download Links

Kannada translation - Bashir Missouri translation for Surah Al-Mumtahanah — Ayah 10

60:10
يَٰٓأَيُّهَا ٱلَّذِينَ ءَامَنُوٓاْ إِذَا جَآءَكُمُ ٱلۡمُؤۡمِنَٰتُ مُهَٰجِرَٰتٖ فَٱمۡتَحِنُوهُنَّۖ ٱللَّهُ أَعۡلَمُ بِإِيمَٰنِهِنَّۖ فَإِنۡ عَلِمۡتُمُوهُنَّ مُؤۡمِنَٰتٖ فَلَا تَرۡجِعُوهُنَّ إِلَى ٱلۡكُفَّارِۖ لَا هُنَّ حِلّٞ لَّهُمۡ وَلَا هُمۡ يَحِلُّونَ لَهُنَّۖ وَءَاتُوهُم مَّآ أَنفَقُواْۚ وَلَا جُنَاحَ عَلَيۡكُمۡ أَن تَنكِحُوهُنَّ إِذَآ ءَاتَيۡتُمُوهُنَّ أُجُورَهُنَّۚ وَلَا تُمۡسِكُواْ بِعِصَمِ ٱلۡكَوَافِرِ وَسۡـَٔلُواْ مَآ أَنفَقۡتُمۡ وَلۡيَسۡـَٔلُواْ مَآ أَنفَقُواْۚ ذَٰلِكُمۡ حُكۡمُ ٱللَّهِ يَحۡكُمُ بَيۡنَكُمۡۖ وَٱللَّهُ عَلِيمٌ حَكِيمٞ ١٠
ಓ ಸತ್ಯ ವಿಶ್ವಾಸವಿರಿಸಿದವರೇ, ನಿಮ್ಮ ಬಳಿಗೆ ಸತ್ಯವಿಶ್ವಾಸಿನಿ ಸ್ತ್ರೀಯರು ವಲಸೆ ಬಂದುಬಿಟ್ಟರೆ ನೀವು ಅವರನ್ನು ಪರೀಕ್ಷಿಸಿರಿ ವಾಸ್ತವದಲ್ಲಿ ಅವರ ವಿಶ್ವಾಸದ ಕುರಿತು ಅಲ್ಲಾಹನು ಚೆನ್ನಾಗಿ ಬಲ್ಲನು. ಆದರೆ ನೀವು ಅವರನ್ನು ಸತ್ಯವಿಶ್ವಾಸಿನಿಗಳೆಂದು ಅರಿತುಕೊಂಡಲ್ಲಿ ಅವರನ್ನು ಸತ್ಯನಿಷೇಧಿಗಳ ಬಳಿಗೆ ಹಿಂದಿರುಗಿಸಬೇಡಿರಿ. ಅವರು ಅವರಿಗೆ ಧರ್ಮಸಮ್ಮತವಲ್ಲ ಮತ್ತು ಸತ್ಯ ನಿಷೇಧಿಗಳೂ ಅವರಿಗೆ ಧರ್ಮಸಮ್ಮತರಲ್ಲ ಮತ್ತು ಅವರ ಸತ್ಯನಿಷೇಧಿ ಪತಿಯರು ಮಾಡಿರುವ ಖರ್ಚನ್ನು ನೀವು ಅವರಿಗೆ ಕೊಟ್ಟುಬಿಡಿ, ನೀವು ಆ ಸ್ತ್ರೀಯರನ್ನು ಅವರ ಮಹರ್(ವಧುಧನ) ಪಾವತಿಸಿರಿ, ಅವರೊಂದಿಗೆ ವಿವಾಹ ಮಾಡಿಕೊಳ್ಳುವುದರಲ್ಲಿ ನಿಮ್ಮ ಮೇಲೆ ಯಾವ ದೋಷವೂ ಇರುವುದಿಲ್ಲ, ನೀವು ಸತ್ಯನಿಷೆೆÃಧಿ ಸ್ತ್ರೀಯರನ್ನು ವಿವಾಹ ಬಂಧನದಲ್ಲಿರಿಸಿಕೊಳ್ಳಬೇಡಿರಿ. ಮತ್ತು ನೀವು ಖರ್ಚು ಮಾಡಿರುವುದನ್ನು ಕೇಳಿ ಪಡೆಯಿರಿ ಮತ್ತು ಅವರೂ ಸಹ ತಾವು ಖರ್ಚು ಮಾಡಿರುವುದನ್ನು ಕೇಳಿ ಪಡೆಯಲಿ. ಇದು ಅಲ್ಲಾಹನ ತೀರ್ಪು ಆಗಿದೆ. ಅವನು ನಿಮ್ಮ ನಡುವೆ ತೀರ್ಮಾನ ಮಾಡುತ್ತಾನೆ ಮತ್ತು ಅಲ್ಲಾಹನು ಮಹಾಜ್ಞಾನಿಯೂ ಯುಕ್ತಿಪೂರ್ಣನೂ ಆಗಿದ್ದಾನೆ.