Kannada translation - Bashir Missouri

Ayah by Ayah

Tags

Download Links

Kannada translation - Bashir Missouri translation for Surah Al-Mumtahanah — Ayah 12

60:12
يَٰٓأَيُّهَا ٱلنَّبِيُّ إِذَا جَآءَكَ ٱلۡمُؤۡمِنَٰتُ يُبَايِعۡنَكَ عَلَىٰٓ أَن لَّا يُشۡرِكۡنَ بِٱللَّهِ شَيۡـٔٗا وَلَا يَسۡرِقۡنَ وَلَا يَزۡنِينَ وَلَا يَقۡتُلۡنَ أَوۡلَٰدَهُنَّ وَلَا يَأۡتِينَ بِبُهۡتَٰنٖ يَفۡتَرِينَهُۥ بَيۡنَ أَيۡدِيهِنَّ وَأَرۡجُلِهِنَّ وَلَا يَعۡصِينَكَ فِي مَعۡرُوفٖ فَبَايِعۡهُنَّ وَٱسۡتَغۡفِرۡ لَهُنَّ ٱللَّهَۚ إِنَّ ٱللَّهَ غَفُورٞ رَّحِيمٞ ١٢
ಓ ಪೈಗಂಬರೇ ಸತ್ಯವಿಶ್ವಾಸಿನಿಯರು ನಿಮ್ಮ ಬಳಿಗೆ ಬಂದು ಅಲ್ಲಾಹನೊಂದಿಗೆ ಯಾರನ್ನು ಸಹಭಾಗಿಯನ್ನಾಗಿ ಮಾಡಲಾರೆವು, ನಾವು ಕಳ್ಳತನ ಮಾಡಲಾರೆವು, ವ್ಯಭಿಚಾರವೆಸಗಲಾರೆವು, ತಮ್ಮ ಮಕ್ಕಳನ್ನು ಕೊಲ್ಲಲಾರೆವು, ಉದ್ದೇಶಪೂರ್ವಕವಾಗಿ ಸುಳ್ಳಾರೋಪವನ್ನು ಹೊರಿಸಲಾರೆವು ಯಾವ ಒಳಿತಿನಲ್ಲೂ ನಿಮ್ಮನ್ನು ಧಿಕ್ಕರಿಸಲಾರೆವು ಎಂಬ ವಿಷಯಗಳ ಕುರಿತು ಅವರು 'ಬೈಅತ್'(ಪ್ರತಿಜ್ಞೆ) ಮಾಡಿದರೆ ನೀವು ಅವರಿಂದ ಬೈಅತ್‌ಅನ್ನು ಸ್ವೀಕರಿಸಿಕೊಳ್ಳಿರಿ. ಹಾಗೂ ಅವರಿಗಾಗಿ ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುವನು.