Kannada translation - Bashir Missouri

Ayah by Ayah

Tags

Download Links

Kannada translation - Bashir Missouri translation for Surah At-Talaq — Ayah 1

65:1
يَٰٓأَيُّهَا ٱلنَّبِيُّ إِذَا طَلَّقۡتُمُ ٱلنِّسَآءَ فَطَلِّقُوهُنَّ لِعِدَّتِهِنَّ وَأَحۡصُواْ ٱلۡعِدَّةَۖ وَٱتَّقُواْ ٱللَّهَ رَبَّكُمۡۖ لَا تُخۡرِجُوهُنَّ مِنۢ بُيُوتِهِنَّ وَلَا يَخۡرُجۡنَ إِلَّآ أَن يَأۡتِينَ بِفَٰحِشَةٖ مُّبَيِّنَةٖۚ وَتِلۡكَ حُدُودُ ٱللَّهِۚ وَمَن يَتَعَدَّ حُدُودَ ٱللَّهِ فَقَدۡ ظَلَمَ نَفۡسَهُۥۚ لَا تَدۡرِي لَعَلَّ ٱللَّهَ يُحۡدِثُ بَعۡدَ ذَٰلِكَ أَمۡرٗا ١
ಓ ಪೈಗಂಬರರೇ (ಹೇಳಿರಿ) ನೀವು ಪತ್ನಿಯರನ್ನು ವಿಚ್ಛೇದಿಸುವುದಾದರೆ, ಅವರ ಇದ್ದಃ(ನರ‍್ಮಲ್ಯದ) ಆರಂಭದ ಕಾಲಾವಧಿಯಲ್ಲಿ ವಿಚ್ಛೇದನೆ ನೀಡಿರಿ ಹಾಗೂ ಇದ್ದಃ ಕಾಲಾವಧಿಯನ್ನು ಸರಿಯಾಗಿ ಎಣಿಸಿರಿ. ಮತ್ತು ನಿಮ್ಮ ಪ್ರಭುವಾದ ಅಲ್ಲಾಹನನ್ನು ಭಯಪಡಿರಿ. ಅವರು ಸ್ಪಷ್ಟ ಪಾಪಕೃತ್ಯವೆಸಗದೇ ನೀವು ಅವರನ್ನು ಇದ್ದಃ ಅವಧಿಯಲ್ಲಿ ಅವರ ಮನೆಗಳಿಂದ ಹೊರ ಹಾಕಬೇಡಿರಿ, (ಸ್ವತಃ) ಅವರೂ ಹೊರಟು ಹೋಗದಿರಲಿ, ಇವು ಅಲ್ಲಾಹನ ನಿಶ್ಚಿತ ಮೇರೆಗಳು ಮತ್ತು ಅಲ್ಲಾಹನ ಮೇರೆಗಳನ್ನು ಮೀರುವವನೇ ನಿಜವಾಗಿಯೂ ತನ್ನ ಮೇಲೆ ಅಕ್ರಮ ಮಾಡಿದನು ಬಹುಶಃ ಇದ್ದಃದ ಬಳಿಕ ಅಲ್ಲಾಹನು ಯಾವುದಾದರೂ ಹೊಂದಾಣಿಕೆಯ ಹೊಸ ದಾರಿಯನ್ನುಂಟು ಮಾಡಬಹುದು. ಅದು ನಿಮಗೆ ತಿಳಿಯದು.