Kannada Translation

Ayah by Ayah

Tags

Download Links

Kannada Translation translation for Surah Saba — Ayah 24

34:24
۞ قُلۡ مَن يَرۡزُقُكُم مِّنَ ٱلسَّمَٰوَٰتِ وَٱلۡأَرۡضِۖ قُلِ ٱللَّهُۖ وَإِنَّآ أَوۡ إِيَّاكُمۡ لَعَلَىٰ هُدًى أَوۡ فِي ضَلَٰلٖ مُّبِينٖ ٢٤
(ಪೈಗಂಬರರೇ) ಕೇಳಿರಿ, ‘ನಿಮಗೆ ಭೂಮಿ- ಆಕಾಶಗಳಿಂದ ಜೀವನಾಧಾರ ಕೊಡುವವನು ಯಾರು?’ ಹೇಳಿರಿ; “ಅಲ್ಲಾಹು,1 ನಿಶ್ಚಯವಾಗಿ ಯೂ ನಾವು ಇಲ್ಲವೇ ನೀವು ಇರುವುದು ಸನ್ಮಾರ್ಗ ದಲ್ಲಿ ಅಥವಾ ಸುವ್ಯಕ್ತ ಪಥಭ್ರಷ್ಟತೆಯಲ್ಲಿ”2.
Footnotes
  • [1] ಈ ಪ್ರಶ್ನೆಯ ಉದ್ದೇಶ ಮುಶ್ರಿಕರಿಗೆ ಪ್ರತಿಕೂಲ ಪುರಾವೆಯನ್ನು ನೀಡುವುದು. ಅನ್ನದಾತ ಯಾರೋ ಅವನೇ ಆರಾಧನಾರ್ಹ. ಮುಶ್ರಿಕರಾದರೊ ಬೇರೆ ಯಾರಾದರೂ ಅನ್ನದಾತನನ್ನು ತೋರಿಸುವುದೂ ಇಲ್ಲ. ಆದ್ದರಿಂದಲೇ `ಅಲ್ಲಾಹು’ ಎಂದು ಉತ್ತರ ಹೇಳಲು ನಬಿಯವರಲ್ಲಿ ಹೇಳಿದ್ದು. ಕಾರಣ, ಬೇರೆ ಉತ್ತರ ಮುಶ್ರಿಕರ ಬಳಿ ಇಲ್ಲ (ತಫ್ಸೀರ್ ಇಬ್ನುಲ್ ಜೌಝಿ 6/454)
  • [2] ಸೂಕ್ತದ ಕೊನೆಯ ವಾಕ್ಯವು ಗಮನೀಯವಾದ ಒಂದು ಬೋಧನಾ ಶೈಲಿ ಕೂಡಾ. ನಾವು ಇಬ್ಬರಲ್ಲಿ ಒಬ್ಬರು ಸನ್ಮಾರ್ಗಿಗಳು ಅಥವಾ ದುರ್ಮಾರ್ಗಿಗಳು! ನೀವು ದುರ್ಮಾರ್ಗಿಗಳು ಎಂದು ಹೇಳಿದರೆ ಕೋಪ ಬರುವುದು ಸಹಜ. ಆದರೆ ಅವರ ಆರಾಧ್ಯರಾದ ಕಲ್ಪಿತ ದೇವರು - ಪ್ರತಿಮೆಗಳ ನಿರರ್ಥಕತೆಯನ್ನು ಬೌದ್ಧಿಕ ಹಾಗೂ ಪ್ರಾಮಾಣ್ಯ ಪುರಾವೆಗಳಿಂದ ಸ್ಪಷ್ಟಪಡಿಸಿದ ನಂತರ ದುರ್ಮಾರ್ಗಿಗಳು ಅವರೇ ಎಂಬುದು ದಿಟ. ಈ ಶೈಲಿಯು ಸೌಮ್ಯ ಹಾಗೂ ಅನುನಯದ್ದಾಗಿದೆ. (ಅಲ್-ಬಹ್ರುಲ್ ಮುಹೀತ್ 7/279)