Kannada Translation

Ayah by Ayah

Tags

Download Links

Kannada Translation translation for Surah Saba — Ayah 42

34:42
فَٱلۡيَوۡمَ لَا يَمۡلِكُ بَعۡضُكُمۡ لِبَعۡضٖ نَّفۡعٗا وَلَا ضَرّٗا وَنَقُولُ لِلَّذِينَ ظَلَمُواْ ذُوقُواْ عَذَابَ ٱلنَّارِ ٱلَّتِي كُنتُم بِهَا تُكَذِّبُونَ ٤٢
ಈ ದಿನ ನೀವು ಪರಸ್ಪರ ಯಾರಿಗೂ ಲಾಭವನ್ನಾಗಲಿ, ನಷ್ಟವನ್ನಾಗಲಿ ಒಡೆತನ ಗೊಳಿಸುವುದಿಲ್ಲ. ಅಕ್ರಮಿಗಳಿಗೆ, ‘ನೀವು ಸುಳ್ಳಾಗಿಸುತ್ತಿದ್ದ ನರಕ ಶಿಕ್ಷೆಯ ರುಚಿಯನ್ನು ಸವಿಯಿರಿ’ ಎಂದು ಹೇಳುವೆವು1.
Footnotes
  • [1] ಸತ್ಯನಿಷೇಧಿಗಳನ್ನುದ್ದೇಶಿಸಿ ಸಾಕ್ಷಿಗಳ ಎದುರೇ ಹೀಗೆ ಹೇಳುವುದಕ್ಕೆ ಹಲವು ಉದ್ದೇಶಗಳಿವೆ. ಒಂದು ಅವರ ದೌರ್ಬಲ್ಯದ ಪ್ರಕಟಣೆ. ಇದರಿಂದ ತಮ್ಮ ಆರಾಧಕರು ಕೂಡಾ ಏನಾದರೊಂದು ಉಪಕಾರ ಮಾಡಲಾಗದ ಅಶಕ್ತರು ಎಂಬುದು ಅವರಿಗೆ ವ್ಯಕ್ತವಾಗುತ್ತದೆ. ಬಹು ದೇವರುಗಳಿಂದ ಆರಾಧ ಕರು ನಿರೀಕ್ಷಿಸಿದ್ದ ಪ್ರಯೋಜನ ದಕ್ಕದೆ ಹೋಗಿ ಅವರ ಆಸೆಗಳೆಲ್ಲ ಭಗ್ನವಾಗುವ ಅವಸ್ಥೆ ಸಂಜಾತವಾಗುವುದು. ಆರಾಧಕರಿಗೂ, ಆರಾಧ್ಯರಿಗೂ ಪರಸ್ಪರ ಯಾವ ಗುಣ - ದೋಷಗಳನ್ನೂ ಮಾಡಲಾಗದು ಎಂಬ ಘೋಷಣೆಯ ಮೂಲಕ ಆ ಭಗ್ನಾಕಾಂಕ್ಷಿಗಳ ದೌರ್ಬಲ್ಯ ಸಂಪೂರ್ಣ ಪ್ರಕಟವಾಗುವುದು. ಮಲಕ್‍ಗಳಿಗೂ ಕೂಡಾ ತಮ್ಮನ್ನು ಆರಾಧಿಸಿದವರಿಗೆ ಯಾವುದೇ ನೆರವು ನೀಡಲು ಅಸಾಧ್ಯವಾಗಿರುವಂತೆ ಆರಾಧಕರಿಗೂ ಯಾವುದೇ ನೆರವು ನೀಡಿಕೆ ಅಸಾಧ್ಯವಾಗಿದೆ. (ತಫ್ಸೀರ್ ಅಬುಸ್ಸುಊದ್ 4/234)