Kannada Translation

Ayah by Ayah

Tags

Download Links

Kannada Translation translation for Surah Saba — Ayah 43

34:43
وَإِذَا تُتۡلَىٰ عَلَيۡهِمۡ ءَايَٰتُنَا بَيِّنَٰتٖ قَالُواْ مَا هَٰذَآ إِلَّا رَجُلٞ يُرِيدُ أَن يَصُدَّكُمۡ عَمَّا كَانَ يَعۡبُدُ ءَابَآؤُكُمۡ وَقَالُواْ مَا هَٰذَآ إِلَّآ إِفۡكٞ مُّفۡتَرٗىۚ وَقَالَ ٱلَّذِينَ كَفَرُواْ لِلۡحَقِّ لَمَّا جَآءَهُمۡ إِنۡ هَٰذَآ إِلَّا سِحۡرٞ مُّبِينٞ ٤٣
ನಮ್ಮ ಸುವ್ಯಕ್ತ ಸೂಕ್ತಗಳನ್ನು ಇವರಿಗೆ ಓದಿ ಹೇಳಿದಾಗ ಇವರು, ‘ಇವರು ಕೇವಲ ನಿಮ್ಮ ಪೂರ್ವಜರು ಪೂಜಿಸುತ್ತಾ ಬಂದಿರುವÀ ಆರಾಧ್ಯರಿಂದ ನಿಮ್ಮನ್ನು ತಡೆಯಲು ಉದ್ದೇಶಿಸುವ ವ್ಯಕ್ತಿ’ ಎನ್ನುತ್ತಾರೆ. ‘ಇದು ಖುರ್‍ಆನ್ ಕೇವಲ ಒಂದು ಕಲ್ಪಿತ ಸುಳ್ಳು’ ಎಂದೂ ಹೇಳುತ್ತಾರೆ. ಆ ಸತ್ಯನಿಷೇಧಿಗಳಿಗೆ ಸತ್ಯವು ಬಂದೊದಗಿದಾಗ ಇವರು, “ಇದು ಸ್ಪಷ್ಟವಾದ ಜಾಲ ವಿದ್ಯೆಯೇ ಹೊರತು ಇನ್ನೇನೂ ಅಲ್ಲ” ಎಂದು ಹೇಳಿದರು1.
Footnotes
  • [1] ಆ ಮುಶ್ರಿಕರ ಕಾರ್ಯ ಬಹಳ ವಿಸ್ಮಯಕರ ಎಂದಾಗಿದೆ ಇಲ್ಲಿನ ಆಶಯ. ಕಾರಣ; ಈ ಖುರ್‍ಆನ್ ಮಾಟವಲ್ಲದೆ ಇನ್ನೇನೂ ಅಲ್ಲ’’ (ಇನ್ ಹಾದ್ಸಾ ಇಲ್ಲಾ ಸಿಹ್ರುನ್) ಎಂದಾಗಿತ್ತು ಅವರ ಕಟಕಿ ನುಡಿ. (ಅಲಂಕಾರ ಶಾಸ್ತ್ರದಲ್ಲಿ ಈ ಶೈಲಿಗೆ ಪ್ರತ್ಯೇಕ ಪ್ರಸಕ್ತಿಯಿರುವುದು ಶ್ರದ್ಧೇಯ) ಅಷ್ಟಕ್ಕೇ ನಿಲ್ಲಿಸದೆ `ಸ್ಪಷ್ಟವಾದ ಮಾಟ’ (ಸಿಹ್ರುನ್ ಮುಬೀನ್) ಎಂದೂ ಟೀಕಿಸಿದ್ದರು. ಯೋಚಿಸುವ ಯಾವುದೇ ಬುದ್ಧಿವಂತನಿಗೂ ಇದು ಸಿಹ್ರ್ ಎಂಬುದು ದಿಟವಾಗುವುದು ಎಂದರ್ಥ. ಅವರಿದನ್ನು ಯೋಚನಾ ರಹಿತರಾಗಿಯೇ ಹೇಳಿದ್ದರೆಂದು ``ಸತ್ಯ ಬಂದೊದಗಿದಾಗ’’ ಎಂಬ ಮಾತಿನಿಂದ ಸ್ಪಷ್ಟ. ವಿವೇಚನೆಯಿಲ್ಲದೆ ದಿಗ್ಗನೆದ್ದು ನೀಡುವ ಪ್ರತಿಕ್ರಿಯೆ ಎಂದು ಸಾರ. ಈ ಕಟು ನಿಷೇಧ ಹಾಗೂ ಧರ್ಮ ಮತ್ತು ಪ್ರವಾದಿಗಳ ನಿಂದನೆಗೆ ಯಾತನಾಮಯವೂ ಕಠಿಣ ಕಠೋರವೂ ಆದ ಶಿಕ್ಷೆಗೆ ಅವರು ನ್ಯಾಯವಾಗಿಯೂ ಅರ್ಹರೆಂದು ಈ ಸೂಕ್ತದ ಮೂಲಕ ಅಲ್ಲಾಹು ಸ್ಪಷ್ಟಪಡಿಸುತ್ತಾನೆÉ. (ಇಬ್ನು ಕಸೀರ್ 3/ 542) (ಕಶ್ಶಾಫ್ 3/464)