Kannada Translation

Ayah by Ayah

Tags

Download Links

Kannada Translation translation for Surah Saba — Ayah 46

34:46
۞ قُلۡ إِنَّمَآ أَعِظُكُم بِوَٰحِدَةٍۖ أَن تَقُومُواْ لِلَّهِ مَثۡنَىٰ وَفُرَٰدَىٰ ثُمَّ تَتَفَكَّرُواْۚ مَا بِصَاحِبِكُم مِّن جِنَّةٍۚ إِنۡ هُوَ إِلَّا نَذِيرٞ لَّكُم بَيۡنَ يَدَيۡ عَذَابٖ شَدِيدٖ ٤٦
(ಪೈಗಂಬರರೇ,) ಹೇಳಿರಿ; “ನಾನು ನಿಮಗೆ ಕೇವಲ ಒಂದು ಉಪದೇಶ ನೀಡುತ್ತೇನೆ. ನೀವು ಅಲ್ಲಾಹನಿಗಾಗಿ ತಲಾ ಇಬ್ಬರಂತೆಯೂ ಒಬ್ಬರಂತೆಯೂ ಸಿದ್ಧರಾಗಿರಿ. ಆಮೇಲೆ ಆಲೋ ಚಿಸಿರಿ”1. ನಿಮ್ಮ ಸಂಗಾತಿಯಲ್ಲಿ ಯಾವುದೇ ಹುಚ್ಚು ಭಾದಿಸಿಲ್ಲ. ಅವರು ಒಂದು ಘೋರ ಯಾತನೆಯ ಮುಂದೆ ನಿಮಗೆ ಎಚ್ಚರಿಕೆ ನೀಡುವವರು ಮಾತ್ರ.
Footnotes
  • [1] ನಿಮಗೆ ನನ್ನ ಒಂದೇ ಒಂದು ಉಪದೇಶ. ಅದನ್ನು ಅನುಸರಿಸಿದರೆ ನಿಮಗೆ ಸನ್ಮಾರ್ಗ ಪ್ರಾಪ್ತಿ. ಏಕಾಂತನಾಗಿ ಅಥವಾ ಇಬ್ಬಿಬ್ಬರಾಗಿ ಕೂತುಕೊಂಡು ಈ ಆದರ್ಶಗಳ ಬಗ್ಗೆ ಯೋಚಿಸಿರಿ. ಕೂಟದಲ್ಲಿರುವಾಗ ಚಿಂತನೆಗೆ ಅಡ್ಡಿಯಾಗುವುದು ಸಹಜವಾದುದರಿಂದ ಒಬ್ಬೊಬ್ಬರೋ ಇಬ್ಬರೋ ಸೇರಿಕೊಂಡು ಯೋಚಿಸಲು ಕರೆ ಕೊಡಲಾಗಿದೆ. ಇಬ್ಬರು ಪರಸ್ಪರ ನಿಷ್ಪಕ್ಷಪಾತಿಯಾಗಿ ಆಶಯ ವಿನಿಮಯ ಮಾಡುವುದರಿಂದ ಒಬ್ಬನಿಗೆ ಹೊಳೆಯದ ಹೊಸ ಚಿಂತನೆ ಮತ್ತೊಬ್ಬನಿಗೆ ಹೊಳೆದು ಪರಸ್ಪರ ಇಬ್ಬರಿಗೂ ಉಪಕಾರವಾಗುತ್ತದೆ. ಅದೇ ಪ್ರಕಾರ ಬುದ್ಧಿವಂತ, ಚಿಂತನಾಶೀಲ ವ್ಯಕ್ತಿ ಒಬ್ಬನೇ ಕೂತುಕೊಂಡು ಆಲೋಚಿಸಿದರೂ ಪ್ರವಾದಿ ಹಾಗೂ ಖುರ್‍ಆನಿನ ವಾಸ್ತವಿಕತೆ ಹೊಳೆಯದೆ ಇರುವುದಿಲ್ಲ. (ಅಲ್-ಬಹ್ರುಲ್ ಮುಹೀತ್ 7/201)