Kannada Translation

Ayah by Ayah

Tags

Download Links

Kannada Translation translation for Surah Fatir — Ayah 11

35:11
وَٱللَّهُ خَلَقَكُم مِّن تُرَابٖ ثُمَّ مِن نُّطۡفَةٖ ثُمَّ جَعَلَكُمۡ أَزۡوَٰجٗاۚ وَمَا تَحۡمِلُ مِنۡ أُنثَىٰ وَلَا تَضَعُ إِلَّا بِعِلۡمِهِۦۚ وَمَا يُعَمَّرُ مِن مُّعَمَّرٖ وَلَا يُنقَصُ مِنۡ عُمُرِهِۦٓ إِلَّا فِي كِتَٰبٍۚ إِنَّ ذَٰلِكَ عَلَى ٱللَّهِ يَسِيرٞ ١١
ಅಲ್ಲಾಹನು ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿದನು. ತರುವಾಯ ವೀರ್ಯದಿಂದ. ಅನಂತರ ನಿಮ್ಮ ನ್ನು (ಗಂಡು-ಹೆಣ್ಣು) ಜೋಡಿಗಳಾಗಿ ಮಾಡಿದನು1. ಅಲ್ಲಾಹನಿಗೆ ಅರಿವಿಲ್ಲದೆ ಯಾವ ಸ್ತ್ರೀಯೂ ಗರ್ಭ ಧರಿಸುವುದಿಲ್ಲ. ಹೆರುವುದೂ ಇಲ್ಲ. ಯಾವನೇ ಆಯುಷಿಗೆ ಆಯುಷ್ಯ ಕೊಡುವುದಾಗಲಿ, ಆಯುಷ್ಯದಿಂದ ಕಡಿತ ಮಾಡುವುದಾಗಲೀ ಒಂದು ಗ್ರಂಥದಲ್ಲಿ ಲಿಖಿತವಾಗಿರದೆ ಸಂಭವಿಸುವುದಿಲ್ಲ. ಇದು ಅಲ್ಲಾಹನಿಗೆ ಬಲು ಸುಲಭ.
Footnotes
  • [1] ಮಣ್ಣಿನಿಂದ ಸೃಷ್ಟಿ ಅಂದರೆ ಒಂದೋ ಆದಿಪಿತ ಆದಮರ ಸೃಷ್ಟಿ ಮಣ್ಣಿನಿಂದ ಎಂಬುದಾಗಿದೆ. ಮಣ್ಣಲ್ಲಿ ಉತ್ಪತ್ತಿಯಾಗುವ ಧಾನ್ಯ, ಸೊಪ್ಪು, ಕಾಯಿ ಪಲ್ಲೆ, ಹಣ್ಣುಹಂಪಲುಗಳ ಭಕ್ಷ್ಯದಿಂದ ಮನುಷ್ಯನ ಮಾಂಸ, ರಕ್ತ, ಕೊಬ್ಬು ಉತ್ಪತ್ತಿಯಾಗುವುದು. ಅದರಿಂದ ಉತ್ಪತ್ತಿಯಾಗುವ ವೀರ್ಯಕಣದಿಂದ ಮನುಷ್ಯನ ಸೃಷ್ಟಿಯಾಗುತ್ತದೆ ಎಂದೂ ಅರ್ಥೈಸಬಹುದು. `ಜೋಡಿಗಳು’ ಅಂದರೆ ಗಂಡು-ಹೆಣ್ಣು ಎಂದರ್ಥ. ಹೀಗೆ ದ್ವಿವರ್ಗಗಳನ್ನು ಮದುವೆ ಮೂಲಕ ಒಂದಾಗಿಸಿದ್ದು ಅಂತ್ಯದವರೆಗೂ ಮಾನವ ಸಂತತಿಯನ್ನು ಉಳಿಸಲಿಕ್ಕಾಗಿದೆ. (ಜಾಮಿಉಲ್ ಬಯಾನ್ 22/81)