Kannada Translation

Ayah by Ayah

Tags

Download Links

Kannada Translation translation for Surah Fatir — Ayah 4

35:4
وَإِن يُكَذِّبُوكَ فَقَدۡ كُذِّبَتۡ رُسُلٞ مِّن قَبۡلِكَۚ وَإِلَى ٱللَّهِ تُرۡجَعُ ٱلۡأُمُورُ ٤
(ಪೈಗಂಬರರೇ) ಇವರು ನಿಮ್ಮನ್ನು ಸುಳ್ಳಾಗಿಸುತ್ತಿದ್ದರೆ, ನಿಮಗಿಂತ ಮುಂಚೆಯೂ ಅನೇಕ ಸಂದೇಶವಾಹಕರು ಸುಳ್ಳಾಗಿಸಲ್ಪಟ್ಟಿದ್ದಾರೆ1. (ಆದ್ದರಿಂದ ಅವರು ಕ್ಷಮಿಸಿದಂತೆ ನೀವು ಕ್ಷಮಿಸಿರಿ) ಕಾರ್ಯಗಳು ಅಲ್ಲಾಹನೆಡೆಗೇ ಮರಳಲಿವೆ.
Footnotes
  • [1] ಅರ್ಥಾತ್ ನಬಿಯವರೇ! ಈ ಮುಶ್ರ್ರಿಕರು ತಮ್ಮನ್ನು ಸುಳ್ಳಾಗಿಸುವುದಿದ್ದರೆ, ನಿಷೇಧಿಸುವುದಿದ್ದರೆ ಪೂರ್ವ ಪ್ರವಾದಿಗಳಲ್ಲಿ ತಮಗೆ ಮಾದರಿಗಳಿವೆ. ಅವರೂ ತಮ್ಮ ಜನತೆಗೆ ದೇವ ದೃಷ್ಟಾಂತಗಳೊಂದಿಗೇ ನಿಯುಕ್ತರಾಗಿದ್ದರು. ಅಲ್ಲಾಹು ಏಕನು ಎಂಬ ಸಿದ್ಧಾಂತವನ್ನೇ ಅವರೂ ಬೋಧಿಸಿದ್ದರು. ಆದರೆ ಅವರ ಸ್ವಂತ ಜನರೇ ಅವರನ್ನು ಸುಳ್ಳಾಗಿಸಿ ಧಿಕ್ಕರಿಸಿದ್ದಾರೆ. (ಇಬ್ನುಕಸೀರ್ 3/547)