Kannada Translation

Ayah by Ayah

Tags

Download Links

Kannada Translation translation for Surah Ya-Sin — Ayah 69

36:69
وَمَا عَلَّمۡنَٰهُ ٱلشِّعۡرَ وَمَا يَنۢبَغِي لَهُۥٓۚ إِنۡ هُوَ إِلَّا ذِكۡرٞ وَقُرۡءَانٞ مُّبِينٞ ٦٩
ನಾವು ಈ ಪ್ರವಾದಿಗೆ ಕವಿತೆ ಕಲಿಸಿಲ್ಲ. ಕವಿತೆಯು ಅವರಿಗೆ ಭೂಷಣವೂ ಅಲ್ಲ1. ಇದೊಂದು ಉಪ ದೇಶ ಹಾಗೂ ಸ್ಪಷ್ಟವಾಗಿ ಓದಲ್ಪಡುವ (ಖುರ್ ಆನ್) ಗ್ರಂಥವಲ್ಲದೆ ಬೇರೇನೂ ಅಲ್ಲ.
Footnotes
  • [1] ಖುರ್‍ಆನ್ ಒಂದು ಕವಿತೆ ಎಂದು ಹೇಳಿದವರಿಗೆ ಉತ್ತರವಿದು. ಕವಿತೆಯಲ್ಲಿ ಸತ್ಯಕ್ಕಿಂತ ಹೆಚ್ಚು ಭಾವನೆಗಳಿರುತ್ತವೆ. ವಾಸ್ತವಕ್ಕಿಂತ ಹೆಚ್ಚು ವರ್ಣನೆಗಳಿರುತ್ತವೆ. ಪವಿತ್ರ ಖುರ್‍ಆನ್ ಇದರಿಂದ ಮುಕ್ತವಾಗಿದ್ದು ಅದರ ಪ್ರತಿಯೊಂದು ಪದಗಳೂ ಮೌಲ್ಯದ ರಸಗಟ್ಟಿಗಳು. ವ್ಯರ್ಥವಾಗಿ ಒಂದು ಅಕ್ಷರವೂ ಅದರಲ್ಲಿಲ್ಲ. ಅದು ಗದ್ಯವೂ ಪದ್ಯವೂ ಅಲ್ಲದ ಅಮೋಘ ಶೈಲಿಯ ಶ್ರೇಷ್ಠ ವಾಕ್ಯಗಳ ಸಮಾಹಾರ. ಪ್ರವಾದಿಯ ಬಾಯಿಂದ ಹೊರಡುವ ಪ್ರತಿಯೊಂದು ಪದವೂ ವಿಶ್ವದ ಜನತೆಗೆ ಘನವೆತ್ತ ಆದರ್ಶಗಳು. ಆದ್ದರಿಂದ ಅವರ ಪವಿತ್ರ ನಾಲಗೆಯಿಂದ ಸತ್ಯಗಳೇ ಹೊರಬರಬೇಕು. ಹಾಗಾಗಿ ಕಲ್ಪನೆ, ವರ್ಣನೆಗಳೇ ಜೀವಾಳವಾಗಿರುವ ಕಾವ್ಯ ರಚನೆ, ವಾಚನವನ್ನು ಅವರಿಗೆ ನಿಷೇಧಿಸಲಾಗಿದೆ.