Kannada Translation

Ayah by Ayah

Tags

Download Links

Kannada Translation translation for Surah Ash-Shuraa — Ayah 6

42:6
وَٱلَّذِينَ ٱتَّخَذُواْ مِن دُونِهِۦٓ أَوۡلِيَآءَ ٱللَّهُ حَفِيظٌ عَلَيۡهِمۡ وَمَآ أَنتَ عَلَيۡهِم بِوَكِيلٖ ٦
ಅಲ್ಲಾಹನನ್ನು ಬಿಟ್ಟು ಇತರರನ್ನು ತಮ್ಮ ರಕ್ಷಕರಾಗಿ1 ಮಾಡಿಕೊಂಡಿರುವವರ ಮೇಲ್ವಿಚಾರಕನು ಅಲ್ಲಾಹನೇ ಆಗಿರುತ್ತಾನೆ. ನೀವು ಅವರ ಮೇಲೆ ಹೊಣೆಗಾರರಲ್ಲ.
Footnotes
  • [1] ರಕ್ಷಕರನ್ನಾಗಿ ಮಾಡುವುದು ಎಂದರೆ ಇತರರನ್ನು ಅಲ್ಲಾಹನ ಭಾಗೀದಾರರು ಮತ್ತು ಪ್ರತಿಸ್ಪರ್ಧಿಗಳನ್ನಾಗಿ ಮಾಡುವುದು ಎಂದರ್ಥ. ಆದರೆ ತಮ್ಮ ಪ್ರಭುವಿನ ಸೇವೋಪಾಸನೆಯಲ್ಲಿ ಅಲ್ಲಾಹನ ಸಂಪ್ರೀತಿಯನ್ನು ಗಳಿಸಿಕೊಂಡ ಔಲಿಯಾಗಳನ್ನು ಪ್ರೀತಿಸುವುದು ಮತ್ತು ಅವರೊಂದಿಗೆ ಸಂಪರ್ಕ ಸಾಧಿಸುವುದು ಅಲ್ಲಾಹನ ಅನುಸರಣೆಯಲ್ಲಿ ಸೇರಿದೆ. ಏಕೆಂದರೆ ಅವರು ಅಲ್ಲಾಹು ಹಾಗೂ ರಸೂಲರೆಡೆಗಿರುವ ವಸೀಲರು. ಅವರನ್ನು ಪ್ರೀತಿಸುವುದು ಅವರ ಮೂಲಕ ತವಸ್ಸುಲ್ ಮಾಡುವುದು ಶಿರ್ಕ್ ಅಲ್ಲ. ಆದರೆ ಸುಜೂದ್‍ನಂಥ ಆರಾಧನಾ ರೂಪದಲ್ಲಿರುವ ಮತ್ತು ಲಾಭ-ಹಾನಿಗಳಲ್ಲಿ ಅವರಿಗೆ ಸ್ವಯಂ ಶಕ್ತಿಯಿದೆಯೆಂದು ನಂಬಿದರೆ ಮಾತ್ರ ಶಿರ್ಕ್ ಬರುವುದು. (ಹಾಶಿಯತು ಸ್ಸಾವಿ)