Kannada Translation

Ayah by Ayah

Tags

Download Links

Kannada Translation translation for Surah Al-Fath — Ayah 29

48:29
مُّحَمَّدٞ رَّسُولُ ٱللَّهِۚ وَٱلَّذِينَ مَعَهُۥٓ أَشِدَّآءُ عَلَى ٱلۡكُفَّارِ رُحَمَآءُ بَيۡنَهُمۡۖ تَرَىٰهُمۡ رُكَّعٗا سُجَّدٗا يَبۡتَغُونَ فَضۡلٗا مِّنَ ٱللَّهِ وَرِضۡوَٰنٗاۖ سِيمَاهُمۡ فِي وُجُوهِهِم مِّنۡ أَثَرِ ٱلسُّجُودِۚ ذَٰلِكَ مَثَلُهُمۡ فِي ٱلتَّوۡرَىٰةِۚ وَمَثَلُهُمۡ فِي ٱلۡإِنجِيلِ كَزَرۡعٍ أَخۡرَجَ شَطۡـَٔهُۥ فَـَٔازَرَهُۥ فَٱسۡتَغۡلَظَ فَٱسۡتَوَىٰ عَلَىٰ سُوقِهِۦ يُعۡجِبُ ٱلزُّرَّاعَ لِيَغِيظَ بِهِمُ ٱلۡكُفَّارَۗ وَعَدَ ٱللَّهُ ٱلَّذِينَ ءَامَنُواْ وَعَمِلُواْ ٱلصَّٰلِحَٰتِ مِنۡهُم مَّغۡفِرَةٗ وَأَجۡرًا عَظِيمَۢا ٢٩
ಮುಹಮ್ಮದರು ಅಲ್ಲಾಹನ ಸಂದೇಶವಾಹಕರು. ಅವರ ಜೊತೆಗಿರುವವರು ಸತ್ಯನಿಷೇಧಿಗಳ ಪಾಲಿಗೆ ಕಠಿಣರೂ ಪರಸ್ಪರ ಕರುಣಾಳುಗಳೂ ಆಗಿರುತ್ತಾರೆ. ಅಲ್ಲಾಹನ ಅನುಗ್ರಹ ಮತ್ತು ಸಂಪ್ರೀತಿಯನ್ನು ಅರಸುತ್ತ ಅವರು ರುಕೂಅï ಮತ್ತು ಸುಜೂದ್ ಮಾಡಿ ನಮಾಝ್ ಮಾಡು ವುದನ್ನು ನೀವು ಕಾಣುವಿರಿ. ಸುಜೂದ್‍ನ ಫಲ ವಾಗಿ ಅವರ ಗುರುತುಗಳು ಅವರ ಮುಖಗಳಲ್ಲಿವೆ1. ಇದು ತೌರಾತ್‍ನಲ್ಲಿರುವ, ಅವರ ಗುಣ ವಿಶೇಷವಾಗಿದೆ. ಇನ್ಜೀಲ್‍ನಲ್ಲಿ ಅವರ ಉದಾಹರಣೆಯನ್ನು ಹೀಗೆ ಕೊಡಲಾಗಿದೆ2. ಒಂದು ಪೈರು, ಅದು ಟಿಸಿಲೊಡೆಯಿತು. ತರುವಾಯ ಅದನ್ನು ಬಲಪಡಿಸಿಕೊಂಡಿತು. ಅನಂತರ ಅದು ಬಿರುಸುಗೊಂಡಿತು. ನಂತರ ಅದು ಕೃಷಿಕನನ್ನು ಮುದಗೊಳಿಸುತ್ತಾ ತನ್ನ ಕಾಂಡದ ಮೇಲೆ ನೆಲೆಯೂರಿತು. (ಸತ್ಯವಿಶ್ವಾಸಿಗಳಿಗೆ ಈ ಉಪಮೆ ನೀಡಿದ್ದು) ಇವರ ಮುಖಾಂತರ ಸತ್ಯನಿಷೇಧಿಗ ಳನ್ನು ಕೆರಳಿಸುವ ಸಲುವಾಗಿ. ಇವರ ಕೂಟದಲ್ಲಿ ಸತ್ಯವಿಶ್ವಾಸವಿರಿಸಿಕೊಂಡು ಸತ್ಕರ್ಮವೆಸಗಿದವರಿಗೆ ಅಲ್ಲಾಹನು ಕ್ಷಮೆ ಮತ್ತು ಘನವೆತ್ತ ಪ್ರತಿಫಲ ವಾಗ್ದಾನವಿತ್ತಿರುತ್ತಾನೆ.
Footnotes
  • [1] ಇದು ಹಣೆಯಲ್ಲಿ ಜಿಡ್ಡುಗಟ್ಟಿದ ಕಲೆಯಲ್ಲ. ಬದಲಾಗಿ ದೇವಭಯ - ಭಕ್ತಿಯಿಂದ ಅವರ ಮುಖದಲ್ಲಿ ಪ್ರಜ್ವಲಿಸುವ ಕಾಂತಿಯಾಗಿದೆ. (ಖುರ್ತುಬಿ 16/293)
  • [2] ತೌರಾತ್ ಗ್ರಂಥವು ಯಥಾ ರೂಪದಲ್ಲಿ ಇಂದು ಲಭ್ಯವಿಲ್ಲದಿದ್ದರೂ ಅಳಿದುಳಿದ ಕೆಲವು ಭಾಗಗಳು ಬೈಬಲ್ ಹಳೆಯ ನಿಯಮದಲ್ಲಿ ಕಂಡುಬರುತ್ತವೆ. ಅದರ ಸಂಖ್ಯಾ ಪುಸ್ತಕದಲ್ಲಿ ಸಾಷ್ಟಾಂಗ ನಿರತರಾದ ಸತ್ಯವಿಶ್ವಾಸಿಗಳ ಬಗ್ಗೆ ಪ್ರಸ್ತಾಪವಿದೆ. ಇನ್ಜೀಲ್ ಕೂಡಾ ಇಂದು ಮೂಲ ರೂಪದಲ್ಲಿ ಲಭ್ಯವಿಲ್ಲ. ಆದರೂ ನಾಲ್ಕು ಸುವಾರ್ತೆಗಳಲ್ಲಿ ಇಂದು ಲಭ್ಯವಿರುವ ಅದರ ಅವಶಿಷ್ಟ ಭಾಗಗಳ ಪೈಕಿ ಮಾರ್ಕ್ ಬರೆದ ಸುವಾರ್ತೆಯಲ್ಲಿ ಸಮೃದ್ಧಿಯಾಗಿ ಬೆಳೆದು ಬಿರುಸುಗೊಳ್ಳುವ ಒಂದು ಪೈರಿನ ಉದಾಹರಣೆಯಿದೆ.