Kannada Translation

Ayah by Ayah

Tags

Download Links

Kannada Translation translation for Surah Al-Hujurat — Ayah 1

49:1
يَٰٓأَيُّهَا ٱلَّذِينَ ءَامَنُواْ لَا تُقَدِّمُواْ بَيۡنَ يَدَيِ ٱللَّهِ وَرَسُولِهِۦۖ وَٱتَّقُواْ ٱللَّهَۚ إِنَّ ٱللَّهَ سَمِيعٌ عَلِيمٞ ١
ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹು ಮತ್ತು ಅವನ ದೂತರ ಮುಂದೆ ಮೀರಿ ನಡೆಯಬೇಡಿರಿ1. ಅಲ್ಲಾಹನನ್ನು ಭಯಪಡಿರಿ. ಅಲ್ಲಾಹನು ಸರ್ವಶೃತನೂ ಸರ್ವಜ್ಞನೂ ಆಗಿದ್ದಾನೆ.
Footnotes
  • [1] *ಹುಜುರಾತ್ ಅಂದರೆ ಕೊಠಡಿಗಳು. ನಾಲ್ಕನೇ ಆಯತ್‍ನಲ್ಲಿ ಬಂದಿರುವ ಈ ಪದವನ್ನು ಸೂರಾಕ್ಕೆ ಹೆಸರಿಸಲಾಗಿದೆ. ಅಲ್ ಮುಫಸ್ಸಲ್ ಎಂಬ ವಿಶೇಷ ವಿಭಾಗೀಯ ನಾಮದಲ್ಲಿ ಕರೆಯಲ್ಪಡುವ ಸೂರಾಗಳ ಪೈಕಿ ಮೊದಲ ಸೂರಾ ಇದು. ಸತ್ಯವಿಶ್ವಾಸಿಗಳು ನಬಿಯವರೊಂದಿಗೆ ಪಾಲಿಸಬೇಕಾದ ಶಿಸ್ತು, ಮರ್ಯಾದೆಗಳು ಈ ಅಧ್ಯಾಯದ ಪ್ರಧಾನ ವಿಷಯ. ಮುಸ್ಲಿಮರು ಪರಸ್ಪರ ಪಾಲಿಸಬೇಕಾದ ಶಿಸ್ತು, ಮರ್ಯಾದೆಗಳ ವಿಚಾರವೂ ಇದೆ. ಯಾವುದೇ ಪ್ರಸ್ಥಾನದ ಮೇಲ್ಮೆಯು ಅದರ ಜನರ ಮೇಲ್ಮೆಯನ್ನು ಅವಲಂಭಿಸಿದೆ. ನಾಯಕತ್ವ ಪವಿತ್ರ ಹಾಗೂ ಆದರಣೀಯರಾಗಿದ್ದು ಅನುಯಾಯಿಗಳೂ ಸುಸಂಸ್ಕøತರಾಗಿದ್ದರೆ ಆ ಪ್ರಸ್ಥಾನ ಬಾಳಿಕೆ ಬರುತ್ತದೆ. ಆದರೆ ಜಗತ್ತಿನಲ್ಲಿ ಯಾವುದೇ ಪ್ರಸ್ಥಾನದ ನಾಯಕರೊಂದಿಗೆ ಇರುವುದಕ್ಕಿಂತ ಹೆಚ್ಚಿನ ಬಾಧ್ಯತೆ ಮುಸ್ಲಿಮರಿಗೆ ಅವರ ನಾಯಕರಾದ ನಬಿಯವರ ಮೇಲಿವೆ. ಈ ವಿಷಯವನ್ನು ಈ ಸೂರಃದಿಂದ ಗ್ರಹಿಸಿಕೊಳ್ಳಬಹುದು. ಮಾತು, ಕೃತಿಗಳಲ್ಲಿ ಅಲ್ಲಾಹು ಮತ್ತು ಆತನ ಸಂದೇಶವಾಹಕರ ಆದೇಶಗಳನ್ನು ಮೀರಬೇಡಿರಿ. ನಿಮ್ಮ ಎಲ್ಲಾ ನಡಾವಳಿಗಳು ಅವರ ಆದೇಶಗಳಿಗೆ ಬದ್ದವಾಗಿರಲಿ ಎಂದರ್ಥ.