Kannada Translation

Ayah by Ayah

Tags

Download Links

Kannada Translation translation for Surah Al-Insan — Ayah 1

76:1
هَلۡ أَتَىٰ عَلَى ٱلۡإِنسَٰنِ حِينٞ مِّنَ ٱلدَّهۡرِ لَمۡ يَكُن شَيۡـٔٗا مَّذۡكُورًا ١
ಪ್ರಸ್ತಾಪಿಸತಕ್ಕ ಒಂದು ವಸ್ತುವೇ ಆಗಿರದಂತಹ ಕಾಲವೊಂದು ಮಾನವನ ಮೇಲೆ ಕಳೆದಿಲ್ಲವೇ?1
Footnotes
  • [1] *ಈ ಅಧ್ಯಾಯದಲ್ಲಿ ಮನುಷ್ಯನ ಬಗ್ಗೆ ಕೆಲವು ಮೂಲಭೂತ ಪರಾಮರ್ಶೆಗಳು ಇರುವುದರಿಂದ ಇದಕ್ಕೆ ಸೂರತುಲ್ ಇನ್ಸಾನ್ ಎಂದು ಹೆಸರು. ಇದಕ್ಕೆ ಸೂರಃ ದಹ್ರ್ ಎಂದೂ ಹೆಸರಿದೆ. ದಹ್ರ್ ಅಂದರೆ ಕಾಲಘಟ್ಟ. ಅಥವಾ ದೀರ್ಘವಾದ ಕಾಲ ಎಂದರ್ಥ. ಒಂದನೇ ಆಯತ್‍ನಲ್ಲಿ ಈ ಪದಗಳು ಬಂದಿವೆ. ಇದು ಮಕ್ಕಾದಲ್ಲಿ ಅವತೀರ್ಣವೆಂದು ಪ್ರಬಲಾಭಿಪ್ರಾಯ. ಮದೀನಾದಲ್ಲಿ ಎಂಬ ಒಂದು ಅಭಿಪ್ರಾಯವನ್ನು ಕೆಲವು ಮುಫಸ್ಸಿರ್‍ಗಳು ದಾಖಲಿಸಿದ್ದಾರೆ. ಮನುಷ್ಯ ಎಂಬ ಅವಸ್ಥೆಯ ವಿಷಯ ಬಿಡಿ, ಹೇಳತಕ್ಕ ಒಂದು ವಸ್ತುವೇ ಆಗಿರದಂತಹ ಶೂನ್ಯಾವಸ್ಥೆಯೊಂದು ಪ್ರತಿಯೊಬ್ಬ ಮನುಷ್ಯನ ಹಿನ್ನೆಲೆಯಲ್ಲಿದೆ. ಅದೂ ಸುದೀರ್ಘವಾದ ಒಂದು ಕಾಲಘಟ್ಟ! ಭೂಮ್ಯಾಕಾಶಗಳ ಸೃಷ್ಟಿಯ ಮೊದಲೇ ಅನಂತವಾದ ಕಾಲವು ಕಳೆದು ಹೋಗಿದೆ. ಆಮೇಲೆ ಭೂಮ್ಯಾಕಾಶಗಳ ಸೃಷ್ಟಿಯ ನಂತರವೂ ಮೊದಲ ಮಾನವನ ಸೃಷ್ಟಿಗೆ ಮೊದಲು ಕೋಟಿಕೋಟಿ ವರ್ಷಗಳ ಕಾಲ ಸಂದಿದೆ. ಆಮೇಲೆ ಪ್ರತಿಯೊಬ್ಬನ ಸೃಷ್ಟಿಗೆ ಮೊದಲು ಸಹಸ್ರಾರು ವರ್ಷಗಳು ಕಳೆದಿವೆ. ಆ ಕಾಲದಲ್ಲಿ ಅವನ ಸೃಷ್ಟಿಯ ಮೂಲವಸ್ತುವಾದ ವೀರ್ಯ ಕೂಡಾ ಸೃಷ್ಟಿಯಾಗಿರಲಿಲ್ಲ. ಹಾಗೆ ಬಹಳ ದೀರ್ಘಕಾಲದ ಶೂನ್ಯಾ(ನಾಸ್ತಿ)ವಸ್ಥೆಗೆ ವಿರಾಮ ಹಾಕಿಕೊಂಡು ತೀರಾ ಇಲ್ಲದಿದ್ದ ನಾವೆಲ್ಲ ಇರುವ ಅವಸ್ಥೆಗೆ ಬಂದಿದ್ದೇವೆ. ಮನುಷ್ಯನ ಅಸಹಾಯಕತೆ, ಅಲ್ಲಾಹನ ಪರಮಶಕ್ತಿ, ಮನುಷ್ಯನು ಅಲ್ಲಾಹನೊಂದಿಗೆ ಹೊಂದಿರುವ ಪರಮಾವಲಂಬನೆ ಹಾಗೂ ಅಲ್ಲಾಹನ ಸಾಮಥ್ರ್ಯದ ಮುಂದೆ ಮನುಷ್ಯನ ಸಾಮಥ್ರ್ಯದ ಕ್ಷುಲ್ಲಕತೆ ಮೊದಲಾದ ವಿಷಯಗಳು ಚಿಂತನಾರ್ಹವಾಗಿದೆ. ಅಂತಹ ಅಲ್ಲಾಹನಿಗೆ ಈ ಮನುಷ್ಯ ಮರಣಗೊಂಡರೆ ಮರಳಿ ಜೀವ ನೀಡಲು ಸಾಧ್ಯವಿಲ್ಲವೆಂದು ಬುದ್ದಿ ಇರುವವರು ಹೇಳುವ ಮಾತೇ?