Kannada Translation

Ayah by Ayah

Tags

Download Links

Kannada Translation translation for Surah Al-Bayyinah — Ayah 5

98:5
وَمَآ أُمِرُوٓاْ إِلَّا لِيَعۡبُدُواْ ٱللَّهَ مُخۡلِصِينَ لَهُ ٱلدِّينَ حُنَفَآءَ وَيُقِيمُواْ ٱلصَّلَوٰةَ وَيُؤۡتُواْ ٱلزَّكَوٰةَۚ وَذَٰلِكَ دِينُ ٱلۡقَيِّمَةِ ٥
ತಮ್ಮ ಧರ್ಮವನ್ನು ಅಲ್ಲಾಹನಿಗೆ ಮಾತ್ರ ನಿಷ್ಕಳಂಕವಾಗಿ ಮೀಸಲಿಟ್ಟು ಎಲ್ಲ ಮಿಥ್ಯ ಧರ್ಮಗಳಿಂದ ದೂರವಾಗಿ ಅಲ್ಲಾಹನನ್ನು ಮಾತ್ರ ಆರಾಧಿಸಲೂ,1 ನಮಾಝ್ ಸಂಸ್ಥಾಪಿಸಲೂ, ಕಡ್ಡಾಯ ದಾನ ನೀಡಲೂ ಮಾತ್ರವೇ ಅವರಲ್ಲಿ (ಅವರ ವೇದಗಳಲ್ಲಿ) ಆದೇಶಿಸಲಾಗಿತ್ತು. ಅದುವೇ ಸರಿಯಾದ ಧರ್ಮ.
Footnotes
  • [1] ಇಬಾದತ್ (ಆರಾಧನೆ) ಎಂದರೆ ದೈನ್ಯತೆ ಎಂದರ್ಥ. ಕೇವಲ ಅನುಸರಣೆಯಲ್ಲ. ಏಕೆಂದರೆ ಒಂದು ವಿಭಾಗ ಜನರು ಮಲಕ್‍ಗಳು, ಈಸಾ ಹಾಗೂ ವಿಗ್ರಹಗಳನ್ನು ಆರಾಧಿಸಿದರು. ಅವರನ್ನು ಅನುಸರಿಸಲಿಲ್ಲ. ಆದರೆ ಶರೀಅತ್‍ನಲ್ಲಿ ಇಬಾದತ್ ಎಂಬುದು ಪರಮ ದೈನ್ಯತೆ, ಪರಮ ಗೌರವದ ರೂಪದಲ್ಲಿ ಪೂರೈಸಲಾಗುವ ಅಲ್ಲಾಹನ ಪ್ರತಿಯೊಂದು ಅನುಸರಣೆಗೂ ಇರುವ ಹೆಸರಾಗಿದೆ. ಅಂದ ಮೇಲೆ ತನ್ನ ಸತ್ತೆ ಹಾಗೂ ಕ್ರಿಯಾ ವಿಶೇಷಣದಲ್ಲಿ ಏಕೈಕನಾಗಿರುವ ಶಕ್ತಿಯ ಹೊರತು ಈ ಅರ್ಥದಲ್ಲಿ ಆರಾಧನೆಗೆ ಬೇರಾರೂ ಅರ್ಹನಾಗಲಾರನು. ಹೀಗಿರುವಾಗ ಗೌರವದ ಅತ್ಯಂತ ಚರಮಸೀಮೆಯ ಪಾರಮ್ಯವನ್ನು ಇತರರೆಡೆಗೆ ಸಲ್ಲಿಸುವುದು ಸಂಗತವಲ್ಲ. (ರಾಝಿ 33/45)